ಕೊಳಚೆಯಲ್ಲಿ ಗಣೇಶ ವಿಸರ್ಜನೆ ಮಾಡಿದ್ದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುತ್ತ ವಿಡಿಯೋ ಮಾಡಿದ್ದ ಯುವಕ ಅದೇ ಮೂರ್ತಿಗಳಿಗೆ ಕಾಯಕಲ್ಪ ಕಲ್ಪಸಿದ್ದು ಕೊಳಚೆಯಲ್ಲಿನ ಗಣೇಶ ಮೂರ್ತಿಗಳನ್ನು ಸ್ಥಳಾಂತರಿಸಿ ಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಎಲ್ಲ ಯುವಕರಿಗೆ ಮಾದರಿಯಾಗಿದ್ದಾನೆ.
ಸಂಭ್ರಮ ಸಡಗರಗಳಿಂದ ಗಣೇಶ ಹಬ್ಬ ಆಚರಣೆ ಮಾಡಿ ಮೂರ್ತಿಯ ವಿಸರ್ಜನೆ ಮಾಡುವಾಗ ಮಾತ್ರ ತೀವ್ರ ನಿರ್ಲಕ್ಷ್ಯ ತೋರುವ ನಕಲಿ ಭಕ್ತರಿಗೆ ಚಾಟಿ ಏಟು ಬೀಸಿರುವ ಯುವಕ ಗಣೇಶನ ಕುರಿತ ಭಕ್ತಿ ಅಸಲಿಯಾಗಿರಬೇಕು ಎಂಬುದನ್ನು ತೋರಿಸಿದ್ದಾನೆ.
ಕೊಳಚೆಯಲ್ಲಿ ಗಣೇಶ ವಿಸರ್ಜನೆ ಮಾಡಿ ಸನಾತನ ಧರ್ಮಕ್ಕೆ ಅವಹೇಳನ ಮಾಡಿದವರು ಈ ಯುವಕನ ನಡೆಯಿಂದ ಎಚ್ಚತ್ತುಕೊಳ್ಳಬೇಕಾಗಿದೆ. ಅಕ್ಷರಶಃ ಕಣ್ಣೀರು ಹಾಕುತ್ತ ಗಣೇಶ ಮೂರ್ತಿಗಳನ್ನು ತಬ್ಬಿ ಗೋಳಾಡಿದ್ದ ಯುವಕ ತನ್ನ ಸ್ನೇಹಿತರೊಂದಿಗೆ ಆಗಮಿಸಿ ಕೊಳಚೆಯಲ್ಲಿದ್ದ ಗಣೇಶ ಮೂರ್ತಿಗಳನ್ನು ಬೇರೆ ಕಡೆ ಸಾಗಿಸಿ ವಿಸರ್ಜನೆ ಮಾಡಿರುವ ವಿಡಿಯೋ ಎಲ್ಲರ ಮನ ತಟ್ಟುವಂತಿದೆ. ಇದರಿಂದ ಗಣೇಶ ಮೂರ್ತಿಗಳು ನಿರಾಳವಾಗಿ ಉಸಿರಾಡುವಂತಾಗಿದೆ.

