ಗಾಂಧೀಜಿ ಜೀವನ ಮೌಲ್ಯಗಳ ಪುನರುತ್ಥಾನ ಯುವ ಜನರಿಂದ ಸಾಧ್ಯ – ಎಸ್ ಸುರೇಶ

Must Read
    ಬೆಂಗಳೂರು ಹೆಸರಘಟ್ಟ ಮುಖ್ಯ ರಸ್ತೆಯ ಸಿಡೇದ ಹಳ್ಳಿಯಲ್ಲಿ ಶಿಕ್ಷಣ ತಜ್ಞ ಡಾ. ಉದಯರತ್ನ ಕುಮಾರ್ ರವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ನಿಸರ್ಗ ವಿದ್ಯಾನಿಕೇತನ ಶಾಲೆಯ ರಜತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ವೋದಯ ಮಂಡಲ ಸಹಯೋಗದೊಂದಿಗೆ ಆಯೋಜಿಸಿದ್ದ ಚರ್ಚಾ ಸ್ಪರ್ಧೆ ಯನ್ನು ಆಚಾರ್ಯ ವಿನೋಬಾ ಭಾವೆಯವರ 131ನೇ ಜಯಂತಿಯ ದಿನದಂದು ರಾಷ್ಟ್ರೀಯ ಸೇವಾ ಯೋಜನೆ ಯ ನಿವೃತ್ತ ಸಲಹೆಗಾರ, ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಎಚ್.ಎಸ್ ಸುರೇಶ್ ಉದ್ಘಾಟಿಸಿದರು.
    ನಂತರ ಅವರು ಮಾತನಾಡುತ್ತಾ ಭವ್ಯ ಭಾರತದ ಭವಿಷ್ಯದ ಪೀಳಿಗೆಯ ಯುವಜನರಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಜೀವನ ಮೌಲ್ಯಗಳು ಪುನರುತ್ಥಾನವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
 ಮಾನವೀಯತೆ ಇಲ್ಲದ ವಿಜ್ಞಾನ, ತತ್ವ ರಹಿತ ರಾಜಕೀಯ, ಚರಿತ್ರೆವಿಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ದುಡಿಮೆ ಇಲ್ಲದ ಸಂಪತ್ತು ಈ ವಿಚಾರಗಳ ಕುರಿತು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಾತನಾಡಿದರು.
 ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶ್ರಾವಣಿ ಆರ್. ಗೌಡ ಪ್ರಥಮ ಬಹುಮಾನ, ಡಿಂಪಲ್ ಮತ್ತು ನಿರೀಕ್ಷ ಎರಡನೇ ಬಹುಮಾನವನ್ನು ಸಮನಾಗಿ ಹಾಗೂ ಸಂತೋಷ ಮೂರನೇ ಬಹುಮಾನಕ್ಕೆ ಭಾಜನರಾದರು.
 ಕರ್ನಾಟಕ ಸರ್ವೋದಯ ಮಂಡಲದ ಗೌ.ಕಾರ್ಯದರ್ಶಿ ಡಾ.ಯ.ಚಿ.ದೊಡ್ಡಯ್ಯ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
 ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಮಾಲಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶಾಲೆಯ ಆಡಳಿತಾಧಿಕಾರಿ ಧನುಷ್ ಕುಮಾರ ವೇದಪುರಿ, ಉಪಸ್ಥಿತರಿದ್ದರು, ಅಧ್ಯಾಪಕರಾದ ಆರಿಫ್ ಪಾಷಾ ಮತ್ತು ಮಮತಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಕು. ಭುವನ ಪ್ರಾರ್ಥನೆ ಮತ್ತು ಸಾವಿತ್ರಮ್ಮನವರು ನಿರೂಪಣೆ ನಡೆಸಿಕೊಟ್ಟರು.
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group