ಮೂಡಲಗಿ : ಬೆಳದಿಂಗಳ ಚಿಂತನ ಮಂಥನ

Must Read

ಮೂಡಲಗಿ – ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜ್ಞಾನದೀಪ್ತಿ ಪೌಂಡೇಷನ್ ಮೂಡಲಗಿ ಇವುಗಳ ಸಹಯೋಗದಲ್ಲಿ ಪಟ್ಟಣದ ಶ್ರೀ ಸತ್ಯ ಸಾಯಿ ದೇವಸ್ಥಾನದಲ್ಲಿ ಬೆಳದಿಂಗಳ ಚಿಂತನ ಮಂಥನ ಕಾರ್ಯಕ್ರಮ ಜರುಗಿತು.

ಉಪನ್ಯಾಸರಾಗಿ ಮಾತನಾಡಿದ  ಲೋಕೇಶ ಹಿಡಕಲರವರು ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರವೆನಿಸಿಕೊಂಡಿರುವ ವಚನ ಸಾಹಿತ್ಯವು, ಅದರ ಸಮಾನತೆ, ಸಾಮಾಜಿಕ ನ್ಯಾಯ, ನೈತಿಕತೆಯಂತಹ ಕಾಲಾತೀತ ತತ್ವಗಳಿಂದಾಗಿ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಕಾಯಕ ಮತ್ತು ದಾಸೋಹದ ಮೂಲಕ ಸಾಮಾಜಿಕ ಸಮಾನತೆಯನ್ನು ಸಾರುವ ವಚನಗಳು, ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯನ್ನು ಒದಗಿಸಿತು. ಇಂದಿನ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೂ ವಚನ ಸಾಹಿತ್ಯದಲ್ಲಿನ ಮಾನವೀಯ ಮೌಲ್ಯಗಳು ಮತ್ತು ವಿಚಾರಗಳು ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಹನುಮಂತ ಸೋರಗಾಂವಿಯವರು ಅಧ್ಯಕ್ಷೀಯವಾಗಿ ಮಾತನಾಡುತ್ತ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನ ಎಲ್ಲ ಮಠ-ಮಂದಿರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡದ ಸಂಪನ್ನು ಪಸರಿಸುತ್ತಿರುವುದು ಶ್ಲಾಘನೀಯವೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಗಮೇಶ.ಗುಜಗೊಂಡ, ಕ.ಸಾ.ಪ.ಅಧ್ಯಕ್ಷ ಡಾ.ಸಂಜಯ .ಅ.ಶಿಂಧಿಹಟ್ಟಿ, ಬಿ.ವಾಯ್.ಶಿವಾಪುರ, ಎ. ಎಚ್. ಒಂಟಗೋಡಿ, ಸುಭಾಷ ಕುರಣೆ, ಸುರೇಶ ಕೋಪರ್ಡೇ, ವೀರಭದ್ರಪ್ಪ ಮಿಲಾನಟ್ಟಿ, ಮಹಾಂತೇಶ ಹೊಸೂರ ,ಹಂಜಿ ,ಮುತ್ನಾಳ, ಶರಣಾರ್ಥಿ, ಕಂಕಣವಾಡಿ, ನಂದಗಾಂವಿ, ಶ್ರೀ ಸತ್ಯ ಸಾಯಿ ಸಮಿತಿಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.

ಬಿ.ಆರ್.ತರಕಾರ ಕಾರ್ಯಕ್ರಮ ನಿರ್ವಹಣೆ ಮಾಡಿದರು , ಶಿವಕುಮಾರ ಕೋಡಿಹಾಳ ಪ್ರಾಸ್ತಾವಿಕ ಹಾಗೂ ಆರ್.ಎಮ್. ಕಾಂಬಳೆ ಪ್ರಾರ್ಥನೆಯನ್ನು ನೆರವೇರಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group