ರಾಣೇಬೆನ್ನೂರು: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಭಾರತೀಯ ವಿದ್ಯಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಭಾರತೀಯ ವಿದ್ಯಾ ಗ್ರಂಥಾಲಯವನ್ನು ಅತಿ ಶೀಘ್ರದಲ್ಲಿ ಸ್ಥಾಪನೆ ಮಾಡಲಾಗುತ್ತದೆ ಈ ಗ್ರಂಥಾಲಯಕ್ಕೆ ಬರುವ ಮಕ್ಕಳಿಗೆ ಹಾಗೂ ಪುಸ್ತಕ ಓದುಗರಿಗೆ ಪುಸ್ತಕಗಳು ಬೇಕಾಗುತ್ತದೆ ಎಂದು ಮನವಿ ಮಾಡಲಾಗಿದೆ.
ಪುಸ್ತಕ ಓದುಗರು ಪುಸ್ತಕ ಪ್ರೇಮಿಗಳು ತಮ್ಮಲ್ಲಿ ಕಥೆ, ಕವನ, ಪ್ರಬಂಧ, ನಾಟಕ, ಕ್ರೀಡೆ, ವಾಣಿಜ್ಯ, ಇನ್ನೂ ಮುಂತಾದ ಶೈಕ್ಷಣಿಕ ಸಂಬಂಧಿಸಿದ ಯಾವುದೇ ಪುಸ್ತಕಗಳನ್ನು ಕಳಿಸಿಕೊಟ್ಟರೆ ಗ್ರಂಥಾಲಯಕ್ಕೆ ಓದಲು ಬರುವ ಓದುಗರಿಗೆ ಅನುಕೂಲ ಆಗುತ್ತದೆ, ಪುಸ್ತಕ ದಾನಿಗಳು ಪುಸ್ತಕ ಕಳುಹಿಸಿ ಕೊಡಬಹುದು
ಮಾಹಿತಿಗಾಗಿ ಭಾರತೀಯ ವಿದ್ಯಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ಶ್ರೀಮತಿ ಅರ್ಚನಾ ಮಠದ ಇವರ ಮೊ ಮತ್ತು ವಾಟ್ಸಪ್ ನಂ: ೯೭೩೧೦೮೧೪೪೪ ಸಂಪರ್ಕ ಮಾಡಬಹುದು ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರು ಪ್ರಕಟಣೆ ತಿಳಿಸಿದ್ದಾರೆ.

