ಮುಧೋಳ – ಲೋಕೋದ್ಧಾರಕ್ಕಾಗಿ ಕಲಿಯುಗದಲ್ಲಿ ಅವತಾರವನ್ನೆತ್ತಿ ಗುರು ರೂಪದಿಂದ ಸಕಲ ಜೀವಿಗಳಿಗೆ ದರ್ಶನವನ್ನು ನೀಡಿ ಸಕಲ ಜೀವಿಗಳ ಸುಖವನ್ನೇ ಬಯಸಿ ಜನರಲ್ಲಿರುವ ಅಜ್ಞಾನ ಅಂಧಕಾರವನ್ನು ತೊಲಗಿಸುವಲ್ಲಿ ನಿತ್ಯವೂ ನಿದ್ರೆಗೈಯದೆ ಲೋಕದ ಚಿಂತನೆ ಮಾಡುತ್ತಿರುವ ಕೃಷ್ಣಾವತಾರಿ, ಮಹಾಪುರುಷ, ತ್ರಿವಿಧ ದಾಸೋಹಿ, ಶೈಕ್ಷಣಿಕ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು ಹೊಸತನದ ಛಾಪು ಮೂಡಿಸಿರುವ ಪಾವನ ಮೂರ್ತಿ ಬಂಡಿಗಣಿ ಪುರವಾಸಿ ಸದ್ಗುರು ಅನ್ನದಾನೇಶ್ವರ ಅಪ್ಪಾಜಿ ಅವರ ಹುಟ್ಟು ಹಬ್ಬದ ಸಂಭ್ರಮವು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಾಳೆ ಗುರುವಾರ ದಿ.18 ರಂದು ನಡೆಯಲಿದೆ ಎಂದು ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಮುಂಜಾನೆ ಸಮಯದಲ್ಲಿ ಸದ್ಗುರುವಿನ ಹುಟ್ಟು ಹಬ್ಬದ ಸಂಭ್ರಮವು ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಓಂಕಾರ ಭಜನೆ ಅಪ್ಪಾಜಿಯವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ, ಮುತ್ತೈದೆಯರಿಂದ ಆರತಿಯನ್ನು ಎತ್ತುವುದು ಶಿವ ಭಜನೆ ಶರಣರಿಗೆ ಸತ್ಕಾರ .ಸಿಹಿ ಹಂಚುವುದು. ನಂತರ ಮಂಗಲ ಪ್ರಸಾದ ಜರುಗುವುದು ಎಂದು ಸ್ವಾಮೀಜಿ ಅವರು ತಿಳಿಸಿದ್ದಾರೆ

