ಶಾಸಕರು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ – ಶರಣಪ್ಪ ಸುಣಗಾರ

Must Read

ಸಿಂದಗಿ: ದೇವರ ಹಿಪ್ಪರಗಿ ಮತಕ್ಷೇತ್ರದ ಕುದುರಿ ಸಾಲೋಟಗಿಯಲ್ಲಿ ಸರಕಾರಿ ಆದೇಶಗಳನ್ನು ಗಾಳಿಗೆ ತೂರಿ ಅಗಲಿಕರಣ ನೆಪದಲ್ಲಿ ಅಧಿಕೃತ ಕಟ್ಟಡಗಳನ್ನು ಬಡವರ ಆಸ್ತಿ-ಪಾಸ್ತಿಗಳನ್ನು ನೆಲ ಸಮ ಮಾಡಿ ತೆರವುಗೊಳಿಸಿ ಶಾಸಕ ರಾಜುಗೌಡ ಪಾಟೀಲ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ತೀವ್ರವಾಗಿ ಖಂಡಿಸಿದರು.

ಪಟ್ಟಣದ ಸ್ವ ಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತೆರವು ಕಾರ್ಯಾಚರಣೆಯಲ್ಲಿ ಸರಕಾರದ ನಿಯಮಾವಳಿ ಇರುತ್ತದೆ ರಾ.ಹೆ, ಜಿ.ಮು.ರಸ್ತೆ, ಎಂ.ಡಿ.ಆರ್ ರಸ್ತೆಗಳಿಗೆ ಆಯಾ ನಿಯಮಗಳಿರುತ್ತವೆ. ಅಕ್ರಮ ಆಸ್ತಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯಬೇಕು. ಅದನ್ನು ಗಾಳಿಗೆ ತೂರಿ ಶಾಸಕರ ದುರಾಡಳಿತ, ಅಧಿಕಾರದ ದಾಹ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಜಕೀಯವಾಗಿ ಬಳಸಿಕೊಂಡು ೫೦,೬೦ ವರ್ಷಗಳವರೆಗೆ ಎರಡೂ ಬದಿ ಇರುವ ಆಸ್ತಿ-ಪಾಸ್ತಿಗಳನ್ನು, ಸಮುದಾಯ ಭವನಗಳನ್ನು ಸಂಪೂರ್ಣ ನೆಲ ಸಮ ಮಾಡಿ ಅಲ್ಲಿನ ಬಡಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿದ್ದಾರೆ. ಆ ಜನರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಅಶೋಕಗೌಡ ಪಾಟೀಲ, ಶಾಂತಗೌಡ ಬಿರಾದಾರ, ಹಸನಸಾಬ ಜೊಕಟನೂರ ಅವರು ಅತಿಕ್ರಮಣ ತೆರವಿಗೆ ಮುಂಚೆ ಸಿಓ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು ಸಹ ಶಾಸಕರ ಮಾತಿಗೆ ಮಣಿದು ನಿಯಮ ಉಲ್ಲಂಘಿಸಿ ತೆರವು ಮಾಡಿದ್ದು ಬಡವರಿಗೆ ಅನ್ಯಾಯವಾಗಿದೆ ಈ ಹಾನಿಗೆ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಅಲ್ಲದೆ ಅನ್ಯಾಯಕ್ಕೊಳಗಾದ ೩೦ ಕುಟುಂಬಗಳ ಹಾನಿಯನ್ನು ಭರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರೋಟೋಕಾಲ್ ನಿಯಮ ಉಲ್ಲಂಘನೆ;

ರೂ ೨ ಕೋಟಿ ವೆಚ್ಚದ ಭವನ ಕಾಮಗಾರಿಗೆ ಸಂಬಂಧಿಸಿದ ಸಚಿವರ ಪೋಟೋ ಹಾಕದೇ ಪ್ರೋಟೋಕಾಲ ನಿಯಮ ಉಲ್ಲಂಘಿಸಿ ಜೆಡಿಎಸ್ ಕಾರ್ಯಕರ್ತರನ್ನು ತೆಗೆದುಕೊಂಡು ಭೂಮಿ ಪೂಜೆ ನೇರವೇರಿಸಿ ಕಾಮಗಾರಿಗೆ ಚಾಲನೆ ನೀಡಿ ಮನ ಬಂದಂತೆ ವರ್ತಿಸುತ್ತಿದ್ದಾರೆ ಅದು ಕಳಪೆ ಮಟ್ಟದಾಗಿ ನಿರ್ಮಾಣ ಮಾಡಲಾಗುತ್ತಿದೆ ಮನ ಬಂದಂತೆ ಹಣ ದುರ್ಬಳಕೆ ಯಾಗುತ್ತಿರುವ ಬಗ್ಗೆ ಮೂರನೇ ಹಂತದ ಅಧಿಕಾರಿಗಳು ಪರಿಶಿಲನೆ ಮಾಡುವಂತೆ ಪತ್ರ ಬರೆಯಲಾಗಿದ್ದು ಅಲ್ಲದೆ ನೀರಾವರಿ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡದಿದ್ದರೆ ತಲೆದಂಡ ತೆತ್ತಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group