ಸಿಂದಗಿ: ಸ.ನಂ. ೮೪೨/೨ರಲ್ಲಿ ಆಸ್ತಿ ಕಳೆದುಕೊಂಡ ನಿರಾಶ್ರಿತರು ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ, ಸರ್ಕಾರದ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ಕಳೆದ ೧೧ ದಿನಗಳಿಂದ ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಮಂಗಳವಾರ ಸಂಜೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಮುಖಂಡರು ಭೇಟಿ ನೀಡಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ – ನಾರಾಯಣಸ್ವಾಮಿ ಮಾತನಾಡಿ, ಪಟ್ಟಣದ `ಸ.ನಂ. ೮೪೨/೨ರ ಫೋಟ್ ಕರಾಬ್ ಆಸ್ತಿಯಿದ್ದರೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಸೈಪನ್ ಕರ್ಜಗಿ ಅವರ ವಿರುದ್ಧ ಪುರಸಭೆ ಆಡಳಿತ ಹೋರಾಟ ಮಾಡಲಿಲ್ಲ, ಪುರಸಭೆ ನಿರ್ಲಕ್ಷ್ಯದಿಂದ ೮೪ ಫಲಾನುಭವಿಗಳು ಕರ್ಜಗಿ ಎನ್ನುವ ವ್ಯಕ್ತಿಗೆ ಬಿಟ್ಟುಕೊಡುವ ದುಸ್ಥಿತಿ ಬಂದಿದೆ. ಪುರಸಭೆ ಅವರೇ ಹಕ್ಕು ಪತ್ರನೀಡಿ, ಫಲಾನುಭವಿಗಳ ಮನೆ ತೆರವು ಆಸ್ತಿ ಕಸಿದುಕೊಂಡಿದ್ದಾರೆ. ಆದ್ದರಿಂದ ಅನ್ಯಾಯಕ್ಕೊಳಗಾದ ೮೪ ಫಲಾನುಭವಿ ಕುಟುಂಬಗಳ ಜೊತೆ ಸರ್ಕಾರ ಆಟವಾಡುತ್ತಿದೆ ಇದಕ್ಕೆ ಪುರಸಭೆಯವರೇ ನ್ಯಾಯ ಕೊಡಬೇಕು. ನಿಮಗೆ ನ್ಯಾಯ ಒದಗಿಸಿಕೊಡುತ್ತೇನೆ. ಎನ್ನುವ ಕಾರಣಕ್ಕೆ ಅಲ್ಲಿನ ಫಲಾನುಭವಿಗಳು ಸಂಗ್ರಹಿಸಿ ೭೫ ಲಕ್ಷ ಹಣ ತೆಗೆದುಕೊಂಡು ಈಗ ಮಾಡೋಣ, ಆಗ ಮಾಡೋಣ ಎಂದು ಭರವಸೆ ಕೊಟ್ಟು ಇಲ್ಲಿನ ೮೪ ಕುಟುಂಬಗಳಿಗೆ ಬೀದಿ ಪಾಲು ಮಾಡುವಲ್ಲಿ ಸ್ಥಳೀಯ ಶಾಸಕರ ನೇರ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಪಟ್ಟಣದ ಸ.ನಂ. ೮೪೨/೨ರ ಆಸ್ತಿ ನನ್ನದು ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ವ್ಯಕ್ತಿ ವಿರುದ್ಧ ನಾವು ೮೪ ಜನ ಫಲಾನುಭವಿಗಳ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತೇವೆ. ಅಲ್ಲಿವರೆಗೂ ಫಲಾನುಭವಿಗಳ ಹೋರಾಟಕ್ಕೆ ನಮ್ಮ ಬೆಂಬಲವಿರುತ್ತದೆ. ಹೋರಾಟಕ್ಕೆ ಬೆಂಬಲ ನೀಡಿದರೇ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಅಧಿಕಾರಿಗಳ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅಧಿಕಾರಿಗಳು ಯಾವಾಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ತಿಳಿಯುತ್ತಿಲ್ಲ. ಅವರ ವಿರುದ್ಧವೂ ಮುಖ್ಯ ಕಾರ್ಯದರ್ಶಿ ಅವರಲ್ಲಿ ದೂರು ಸಲ್ಲಿಸುತ್ತೇನೆ. ೮೪ ಜನ ಫಲಾನುಭವಿಗಳಿಗೆ ಅನ್ಯಾಯವಾಗಲು ಅಧಿಕಾರಿಗಳು ಕಾರಣ ದಲಿತರ ಹಣ ಬಳಸಿಕೊಂಡ ಸರ್ಕಾರ ಬಡವರಿಗೆ ಕೊಡುವುದು. ಮತ್ತೆ ಕಸಿದುಕೊಳ್ಳುವುದು ಕಾಂಗ್ರೆಸ್ ಸರ್ಕಾರದ ನೀತಿಯಾಗಿದೆ ಎಂದು ದೂರಿದರು.
ಸಂಸದ ರಮೇಶ ಜಿಗಜಿಣಗಿ, ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಸಿಂದಗಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ, ಡಂಬಳ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ, ಜಿಪಂ ಮಾಜಿ ಸದಸ್ಯ ಬಿ.ಆರ್. ಯಂಟಮಾನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಜಿಲ್ಲಾ ಪ್ರಕೋಷ್ಠಕ ಮಲ್ಲಿಕಾರ್ಜುನ ಜೋಗುರ, ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಾ, ಪ್ರಧಾನ ಕಾರ್ಯದರ್ಶಿಗಳಾದ ಗುರು ತಳವಾರ, ಸಿದ್ದರಾಮ ಅನಗೊಂಡ, ಸಿದ್ದು ಬುಳ್ಳಾ ಪೀರೂ ಕೆರೂರ, ಸಿದ್ದಲಿಂಗಯ್ಯ ಹಿರೇಮಠ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಮಲ್ಲಣ್ಣ ಮನಗೂಳಿ, ಪ್ರಶಾಂತ ಪಾಟೀಲ ಕನ್ನೊಳ್ಳಿ, ಪರಶುರಾಮ ಗೂಳ್ಳೂರ, ಜಯಶ್ರೀ ನಾಟೀಕಾರ, ಶೋಭಾ ಹಂಚಿನಾಳ, ಜಯಶ್ರೀ ಯಾಳವಾರ, ಶಿವು ಪವಾರ, ಬಸುಗೌಡ ಪಾಟೀಲ ಯಂಕಂಚಿ, ಖಾಜು ಬಂಕಲಗಿ ಭಾಗವಹಿಸಿದ್ದರು.

