ಎಬಿವಿಪಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಲ್ಲಿಕಾರ್ಜುನ ಚೌಕಶಿ ಕರೆ

Must Read

ಘಟಪ್ರಭಾ – ದಿ ೨೩ ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮರ 200ನೇ ವಿಜಯೋತ್ಸವ ಹಾಗೂ ಅಭಯ ರಾಣಿ ಅಬ್ಬಕ್ಕರ 500ನೇ ಜನ್ಮ ಜಯಂತಿಯ ಸ್ಮರಣಾರ್ಥವಾಗಿ  ರಾಣಿ ಚನ್ನಮ್ಮ ಮತ್ತು ಅಬ್ಬಕ್ಕರ ರಥಯಾತ್ರೆ ನಡೆಯುತ್ತಿದ್ದು ಆ ನಿಮಿತ್ತ ಈ ಮಂಗಳವಾರ ಘಟಪ್ರಭಾ ನಗರದ ಮೃತ್ಯುಂಜಯ ಸರ್ಕಲ್ ನಲ್ಲಿ ರಥಯಾತ್ರೆಯ ಸ್ವಾಗತವನ್ನು ಆಯೋಜಿಸಲಾಗಿದೆ.

ಕಿತ್ತೂರು ರಾಣಿ ಚನ್ನಮ್ಮ ಹಾಗೂ ಅಬ್ಬಕ್ಕರ ಸಾಹಸ, ತ್ಯಾಗ ಮತ್ತು ದೇಶಭಕ್ತಿಯನ್ನು ಸಾರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ವಕೀಲ ಹಾಗೂ ರಾಷ್ಟ್ಟ್ರೋತ್ಥಾನ ಪರಿಷತ್ ಸಂಪನ್ಮೂಲ ವ್ಯಕ್ತಿ  ಮಲ್ಲಿಕಾರ್ಜುನ ಚೌಕಶಿ ವಿನಂತಿಸಿಕೊಂಡಿದ್ದಾರೆ.

ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮ್ಮ ಮಹಾನ್ ರಾಣಿ-ವೀರರ ಸಾಧನೆಗಳಿಗೆ ಗೌರವ ಸಲ್ಲಿಸಿ.ಇದೆ ದಿನ ಸಂಜೆ 7 ಗಂಟೆಗೆ ಗೋಕಾಕ ನಗರದ ಕೊಳವಿ ಹನುಮಾನ ಮಂದಿರದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪಂಜಿನ ಮೆರವಣಿಗೆಯೊಂದಿಗೆ ಶೋಭಾಯಾತ್ರೆ ನಡೆಯಲಿದೆ. ಕಾರಣ ಆ ಕಾರ್ಯಕ್ರಮದಲ್ಲಿಯೂ ಭಾಗವಹಿಸಲು ಅವರು ಪ್ರಕಟಯೊಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ

Please share to all groups

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group