ಬಡ ಮಕ್ಕಳ ಶಿಕ್ಷಣ ಹಸಿವು ನೀಗಿಸಲು ಸರ್ಕಾರದಿಂದ ೯ ಸಾವಿರ ಕೋಟಿ ಮೀಸಲು

Must Read

ಸಿಂದಗಿ; ರಾಜ್ಯದ ಬಡ ಮಕ್ಕಳ ಶಿಕ್ಷಣದ ಹಸಿವು ನೀಗಿಸಲು ೯ ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಬಡ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯಬಾರದು ಎನ್ನುವ ದೃಷ್ಟಿಕೋನದಿಂದ ಸರಕಾರ ಮುರಾರ್ಜಿ ವಸತಿ ಶಾಲಾ ಕಟ್ಟಡಕ್ಕೆ ರೂ.೧೬ ಕೋಟಿ, ವಸತಿ ನಿಲಯ ಕಟ್ಟಡಕ್ಕೆ ರೂ. ೮.೫೭ಕೋಟಿ ಅನುದಾನ ನೀಡಿ ಈ ಬಾಗದ ಮಕ್ಕಳ ಶಿಕ್ಷಣದ ಹಸಿವು ನೀಗಿಸಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ತಾಲೂಕಿನ ಹಿಕ್ಕನಗುತ್ತಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಜಾಯತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ ಸಹಯೋಗದಲ್ಲಿ ರೂ ೧೬ ಕೋಟಿ ವೆಚ್ಚದ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲಾ ಹಾಗೂ ರೂ ೮.೫೭ ಕೋಟಿ ವಸತಿ ನಿಲಯದ ಕಟ್ಟಡದ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಸಚಿವ ಜಮೀರ ಅಹ್ಮದ ಹಾಗೂ ಇದಕ್ಕೆ ಸಹಕಾರ ನೀಡಿದ ಮುಖ್ಯಮಂತ್ರಿಗಳಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ ಅವರು, ಗ್ಯಾರಂಟಿ ಯೋಜನೆಗಳ ನಿರ್ವಹಣೆಗಾಗಿ ೫೩.೫೦೦ ಕೋಟಿ ಮೀಸಲಿಟ್ಟು, ಪ್ರತಿ ತಾಲೂಕಿನ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿ ಅಭಿವೃದ್ಧಿಯತ್ತ ದಾಪಗಾಲು ಹಾಕಿದ್ದಾರೆ. ರೂ ೧೪.೫೦ ಕೋಟಿ ವೆಚ್ಚದಲ್ಲಿ ಪ.ಜಾ ಮತ್ತು ಪಪಂ ವಸತಿ ನಿಲಯಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಅವರು ನೀಡಿ ಸಹಕರಿಸಿದ್ದಾರೆ. ಗಣಿಹಾರದಿಂದ ಹಿಕ್ಕನಗುತ್ತಿ ಗ್ರಾಮದವರೆಗೆ ಸುಸಜ್ಜಿತ ಡಾಂಬರಿಕರಣ ರಸ್ತೆ ನಿರ್ಮಾಣಕ್ಕಾಗಿ ಶೀಘ್ರದಲ್ಲಿ ಅನುದಾನ ತರುವುದಾಗಿ ಭರವಸೆ ನೀಡಿದರು.

ಅಲ್ಪ ಸಂಖ್ಯಾತರ ಮುರಾಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಸಿದ್ದಪ್ಪ ಕಾರಿಮುಂಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸನ್ ೨೦೧೭-೧೮ರಲ್ಲಿ ದಿ. ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಅವಧಿಯಲ್ಲಿ ಮುರಾರ್ಜಿ ದೇಸಾಯಿ ಶಾಲೆಯನ್ನು ಪ್ರಾರಂಬಿಸಲಾಗಿತ್ತು. ಅವರ ಪುತ್ರ ಶಾಸಕ ಅಶೋಕ ಮನಗೂಳಿ ಅವರ ಅವಧಿಯಲ್ಲಿ ಕಟ್ಟಡದ ಶಂಕು ಸ್ಥಾಪನೆಗೊಂಡಿದೆ ಇವರ ಅವಧಿಯಲ್ಲೆ ಉದ್ಘಾಟನೆಗೊಳ್ಳುವಂತಾಗಬೇಕು ಎಂದು ಮನವಿ ಮಾಡಿಕೊಂಡ ಅವರು, ಈ ಶಾಲೆಯಲ್ಲಿ ಒಟ್ಟು ೪೯೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಉದ್ದೇಶವಿದ್ದು ಸಿಇಟಿ ಮೂಲಕ ಇಲಾಖೆ ಆಯ್ಕೆ ಮಾಡುತ್ತದೆ. ಕಾರಣ ಬಡ ಅಲ್ಪಸಂಖ್ಯಾತರ ಮಕ್ಕಳು ಪ್ರತಿಶತ ೭೫ ಆದರೆ ಪ್ರತಿಶತ ೨೫ ಹಿಂದೂಳಿದ ವರ್ಗಗಳ ವಿದ್ಯಾರ್ಥಿಗಳ ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.

ಸಾನ್ನಿಧ್ಯವನ್ನು ಗೂಸಯ್ಯ ಹಿರೇಮಠ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರಮೇಶ ತಳವಾರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಎಚ್.ಎಂ.ಯಡಗಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಕರ್ನಾಟಕ ಗೃಹಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಸಾಧಿಕ, ಆಲಮೇಲ ಪಪಂ ಅದ್ಯಕ್ಷ ಸಾಧಿಕ ಸುಂಬಡ, ಗ್ರಾಪಂ ಸದಸ್ಯರಾದ ಪುಂಡಲಿಕ ಬಿರಾದಾರ, ವಿಠ್ಠಲ ಬಡಿಗೇರ, ಕುಮಾರ ದೇಸಾಯಿ, ಸಿದ್ದು ರಾಂಪೂರ, ಸಿದ್ದು ಸಾತಲಗಾಂವ, ಜಟ್ಟೆಪ್ಪ ಗೊಟಗುಣಕಿ, ನಿಂಗಣ್ಣ ಜೆರಟಗಿ, ಸುರಗಿಹಳ್ಳಿ ಮುಖಂಡ ಕಾಂತನಗೌಡ ಪಾಟೀಲ, ಮುಖ್ಯೋಪಾಧ್ಯಾಯಿನಿ ಶೈನಾಬಿ ಮಸಳಿ ಸೇರಿದಂತೆ ಅನೇಕರಿದ್ದರು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಪ್ರಶಾಂತ ಪೂಜಾರಿ ಸ್ವಾಗತಿಸಿದರು. ಡಾ. ಪ್ರಭು ಬಿರಾದಾರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group