ದೇವಿ ಪುರಾಣ ಕೇಳುವುದರಿಂದ ಮನಸಿಗೆ ಶಾಂತಿ ನೆಮ್ಮದಿ ಸಿದ್ಧ ಪ್ರಭು ಶ್ರೀ

Must Read

ಹಳ್ಳೂರ :  ನವ ದುರ್ಗೆಯರ ರೂಪ ತಾಳಿದ ದೇವಿಯು ದುಷ್ಟರ ಸಂಹಾರಕ್ಕೆ ಬೇರೆ ಬೇರೆ ಅವತಾರ ತಾಳಿರುತ್ತಾರೆ ಶಿಷ್ಟರ ಪರಿಪಾಲನೆ ಮಾಡುವುರು ಮಹಾತ್ಮರ ಮಾತುಗಳನ್ನು ಕೇಳಿ ಆಧ್ಯಾತ್ಮಿಕ ಚಿಂತನೆ ನಡೆಸುವರು ಪುಣ್ಯವಂತರು ವ್ಯವಹಾರಿಕ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವರಿಗೆ ನೆಮ್ಮದಿ ಸಿಗುವುದಿಲ್ಲ. ನವರಾತ್ರಿ ಉತ್ಸವದಲ್ಲಿ ದೇವಿ ಪುರಾಣವನ್ನು ಶ್ರದ್ಧಾ ಭಕ್ತಿ ಮನಸಿಟ್ಟು ಕೇಳುವದರಿಂದ ಶಾಂತಿ ನೆಮ್ಮದಿ ದೊರೆಯುತ್ತ ದೆಂದು ಸಿದ್ದ ಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಗ್ರಾಮದ ಶ್ರೀ ದ್ಯಾಮವ್ವಾ ದೇವಿ ದೇವಸ್ಥಾನದಲ್ಲಿ ನಡೆದ ಶ್ರೀ ದೇವಿ ಪುರಾಣ ಮೊದಲನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

ಭಕ್ತ ಮಾರ್ಕಂಡೇಯ ದೇವಿ ಪುರಾಣವನ್ನು ಸಂಸ್ಕೃತದಲ್ಲಿ ಬರೆದರು ಕನ್ನಡದಲ್ಲಿ ಚಿದಾನಂದ ಅವಧೂತರು ಕನ್ನಡಲ್ಲಿ ಅನುವಾದ ಮಾಡಿದರು. ಸತಿ ಸಕ್ಕುಬಾಯಿ ಸಗಣಿಯಿಂದ ತಯಾರು ಮಾಡಿದ ಕುಳ್ಳಿನಲ್ಲಿ ಪಾಂಡುರಂಗ ವಿಠಲ ಎಂದು ಸಪ್ಪಳ ಕೇಳುತ್ತಿತ್ತು ದೇವರ ನಾಮಸ್ಮರಣೆಯಲ್ಲಿ ದೈವಿ ಶಕ್ತಿ ಅಡಗಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ದೇವಿ ಪುರಾಣವನ್ನು ನಡೆಸಿದರೆ ಮಾತ್ರ ಯಶಸ್ವಿಯಾಗುತ್ತದೆಂದು ಹೇಳಿದರು.

ದೇವಾದಿಗಳ ವೇಷ ಭೂಷಣ ಧರಿಸಿದ ಮುದ್ದು ಮಕ್ಕಳು ಐಗಿರಿ ನಂದಿನಿ ಭಕ್ತಿ ಗೀತೆಯ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳಿಗೆ ಉಡಿ ತುಂಬಿದರು. ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ಶಂಕರಯ್ಯ ಹಿರೇಮಠ ಆವರಿಂದ ನಡೆಯಿತು.

ಈ ಸಮಯದಲ್ಲಿ ಶಿವಪ್ಪ ನಿಡೋಣಿ, ಬಸಪ್ಪ ಅರಳಿಮಟ್ಟಿ, ರಾಮಯ್ಯ ಮಠಪತಿ, ದುಂಡಪ್ಪಾ ಸುತಾರ, ನಾಗಪ್ಪ ಕುಳ್ಳೋಳ್ಳಿ, ಲಕ್ಷ್ಮಣ ಬಡಿಗೇರ, ದುಂಡಪ್ಪ ಕತ್ತಿ, ಚನ್ನಪ್ಪ ಬಡಿಗೇರ ಸೇರಿದಂತೆ ಅನೇಕರಿದ್ದರು.
ಕಾರ್ಯಕ್ರಮದಲ್ಲಿ ಮುರಿಗೆಪ್ಪ ಮಾಲಗಾರ ಸ್ವಾಗತಿಸಿ ನಿರೂಪಿಸಿದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group