ಸಿಂದಗಿ; ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೆಚ್ಚುವರಿ ನೀರು ಹರಿದು ಬರುತ್ತಿರುವುದರಿಂದ ಅಲ್ಲದೆ ವಾಡಿಕೆಯಂತೆ ಮಳೆ ಹೆಚ್ಚಾಗಿದ್ದರಿಂದ ಅಂತರ್ಜಲ ಹೆಚ್ಚಾಗಿ ರಾಜ್ಯದ ಬೀದರ, ಕಲಬುರ್ಗಿ, ವಿಜಯಪುರ ಸೇರಿದಂತೆ ಒಟ್ಟು ೧೭೪ ಕಡೆ ಭೂ ಕಂಪನವಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ೭೪ ಬಾರಿ ಭೂ ಕಂಪನವಾಗಿದೆ ಇದರಿಂದ ಯಾವುದೇ ಹಾನಿಯಿಲ್ಲ ಸಾರ್ವಜನಿಕರು ಭಯಪಡುವ ಹಾಗಿಲ್ಲ ಎಂದು ಕೆಎಸ್ಎನ್ಡಿಎಂಎಸ್ನ ವೈಜ್ಞಾನಿಕ ಅಧಿಕಾರಿ ಜಗದೀಶ ಸ್ಪಷ್ಟಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿರುವ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಎನ್ಡಿಎಂಎಸ್ನ ವೈಜ್ಞಾನಿಕ ಅಧಿಕಾರಿ ಮಾತನಾಡಿ, ಸಿಂದಗಿ ೪೭, ಬ.ಬಾಗೆವಾಡಿ ೨೨, ಬಬಲೇಶ್ವರ ೪, ವಿಜಯಪುರ ೭ ಹೀಗೆ ೭೪ ಕಡೆಗಳಲ್ಲಿ ಭೂ ಕಂಪನವಾಗಿದೆ ಇದು ಅಕ್ಟೋಬರ ತಿಂಗಳ ಅಂತ್ಯದವರೆಗೆ ಮಳೆಯಿರುವ ಕಾರಣ ಹೀಗೆ ಕಾಣಿಸಿಕೊಳ್ಳುವುದು ಸಹಜ. ಸಿಂದಗಿ ಬಾಗದಲ್ಲಿ ಸುಣ್ಣದ ಕಲ್ಲುವಿದೆ ಅದು ಪೌಡರವಾಗಿ ನೀರು ಮಿಶ್ರಣವಾಗಿ ನೀರಿನ ಒತ್ತಡ ಜಾಸ್ತಿಯಾಗಿ ಉದ್ಬವವಾದ ಶಬ್ದ ಸಹಿತ ಕಂಪನವಾಗುತ್ತಿದೆ ಇದರಿಂದ ಭೂಕುಸಿತ ಸಂಭವಿಸುವುದಿಲ್ಲ. ಯಾವುದೇ ಕಟ್ಟಡಗಳಿಗೆ ಹಾನಿಯಿಲ್ಲ ಕಂಪನ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರೆ ಹೊರಗಡೆಯಿದ್ದು ಯಾವುದೊ ಕಾರ್ಯದಲ್ಲಿ ತೊಡಗಿ ಅದಕ್ಕೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಕಳೆದ ಮೇ ತಿಂಗಳಿನಿಂದ ಪ್ರಾರಂಭವಾದ ಮಳೆ ಇನ್ನೂವರೆ ಮುಂದುವರೆದಿದೆ ಅದಕ್ಕೆ ಅಂತರ್ಜಲ ಹೆಚ್ಚಾಗಿದ್ದು ಆದ್ದರಿಂದ ಭೂಕಂಪನವಾಗುತ್ತಿದೆ ಇದು ಭೂಕಂಪವಲ್ಲ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾಗಿಲ್ಲ. ರಾಂಪೂರದಲ್ಲಿ ಭೂಕಂಪನ ಮಾಪನ ಅಳವಡಿಸಲಾಗಿದ್ದು ಕಂಪನವಾಗುತ್ತಿರುವ ಬಗ್ಗೆ ಮಾಹಿತಿ ದೊರಕುತ್ತದೆ ಅದನ್ನು ಹಂತ ಹಂತವಾಗಿ ಮಾಹಿತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವೈಜ್ಞಾನಿಕ ಸಹಾಯಕ ಅಧಿಕಾರಿಗಳಾದ ಸಂತೋಷಕುಮಾರ, ಅಣುವೀರಪ್ಪ ಬಿರಾದಾರ ಇದ್ದರು.

