ಬೀದರ – ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಸುಮಾರು 51ಜನರಿಗೆ ನಕಲಿ ಉದ್ಯೋಗದ ಆದೇಶ ನೀಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ಅಧಿಕಾರಿಗಳ ಸಹಿ ಫೋರ್ಜರಿ ಮಾಡಿ ಆದೇಶ ನೀಡಿದ ಪ್ರತಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಕೆಲವು ವ್ಯಕ್ತಿಗಳು ವಿಶ್ವವಿದ್ಯಾಲಯದ ಹೆಸರಿನಲ್ಲಿ ಭಾರೀ ಹಣ ಪಡೆದು ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡುವುದಾಗಿ ಹೇಳಿ ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ಅಧಿಕಾರಿಗಳ ಪೋರ್ಜರಿ ಸಹಿ ಮಾಡಿ ನೀಡುರುವುದು ಪಶು ವಿವಿ ಗಮನಕ್ಕೆ ಬಂದಿದೆ
ಈ ಹಿನ್ನೆಲೆಯಲ್ಲಿ ಪಶು ವಿವಿಯಿಂದ ಪ್ರಕಟಣೆ ಜಾರಿಗೊಳಿಸಲಾಗಿದ್ದು ಪ್ರಸ್ತುತ ವಿವಿಯಲ್ಲಿ ಯಾವುದೇ ರೀತಿಯ ನೇಮಕಾತಿ ಪ್ರಕ್ರಿಯೆ (ಗುತ್ತಿಗೆ ಅಥವಾ ಶಾಶ್ವತ) ನಡೆಯುತ್ತಿಲ್ಲ.
ಉದ್ಯೋಗ ಭರವಸೆ ನೀಡುವುದಾಗಿ ಹೇಳಿ ಸುಳ್ಳು ಭರವಸೆ ನೀಡಿ ಭಾರಿ ಹಣ ಪಡೆಯುತ್ತಿರುವವರು ನಕಲಿ ಆದೇಶ ಪತ್ರ ನೀಡುತ್ತಿದ್ದು ಅದಕ್ಕು ವಿವಿಗೂ ಯಾವುದೆ ಸಂಬಂಧವಿಲ್ಲವೆಂದು ವಿವಿ ಸ್ಪಷ್ಟನೆ ನೀಡಿದೆ.
ಅನುಮಾನಾಸ್ಪದ ಆದೇಶಗಳು ಅಥವಾ ಚಟುವಟಿಕೆಗಳ ಬಗ್ಗೆ ತಕ್ಷಣ ವಿಶ್ವವಿದ್ಯಾಲಯಕ್ಕೆ ಈಮೇಲ್ regkvafsu@gmail.com ಮೂಲಕ ಮಾಹಿತಿ ನೀಡುವಂತೆ ಪಶು ವಿವಿ ಕುಲಪತಿಗಳಾದ ಪಿ ಟಿ ರಮೇಶ ಮನವಿ ಮಾಡಿಕೊಂಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ

