ಸಿಂದಗಿ : ಶಾಂತಿನಿಕೇತನ ಶಾಲೆಯಲ್ಲಿ ಭೈರಪ್ಪನವರಿಗೆ ಶೃದ್ಧಾಂಜಲಿ

Must Read

ಸಿಂದಗಿ : ಚಿಕ್ಕ ಸಿಂದಗಿ ಬೈಪಾಸ್ ಹತ್ತಿರವಿರುವ ಶಾಂತಿನಿಕೇತನ ಪ್ರಾಥಮಿಕ ಶಾಲೆಯಲ್ಲಿ ಖ್ಯಾತ ಸಾಹಿತಿ ಡಾ.ಎಸ್‌ಎಲ್ ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಕ ಸಾ ಪ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಕನ್ನಡ ಸಾಹಿತ್ಯ ಲೋಕ ಕಂಡ ಅದ್ವಿತೀಯ ಬರಹಗಾರ, ಸಾಗರದಷ್ಟು ಓದುಗರ ಬಳಗವನ್ನೇ ತಮ್ಮತ್ತ ಸೆಳೆದುಕೊಂಡಿದ್ದ ಕನ್ನಡದ ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರು ಕನ್ನಡಿಗರನ್ನು ಅಗಲಿದ್ದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ ಅವರು ಭೈರಪ್ಪ ಅವರ ಸಾವಿನ ಸುದ್ದಿ ಕೇಳಿ ಕನ್ನಡ ಸಾಹಿತ್ಯ ಲೋಕ ಮಾತ್ರವಲ್ಲ ಭಾರತದ ಮೂಲೆ ಮೂಲೆಯಲ್ಲೂ ಈಗ ಸಂತಾಪ ಸೂಚಿಸಲಾಗುತ್ತಿದೆ ಎಂದರು.

ಶಿಕ್ಷಕ ಸಿದ್ಧಲಿಂಗ ಚೌಧರಿ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಮಹಾನ್ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅವರ ನಿಧನವು ನಮ್ಮೆಲ್ಲರಿಗೂ ಆಳವಾದ ದುಃಖವನ್ನುಂಟು ಮಾಡಿದೆ ಅವರು ಬರೆದ ಅಪ್ರತಿಮ ಕೃತಿಗಳು ಸದಾ ಶಾಶ್ವತವಾಗಿ ಉಳಿಯುತ್ತವೆ. ಅವರ ಸಾಹಿತ್ಯಕನ್ನಡ ಭಾಷೆಯ ಶ್ರೇಷ್ಠತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಅವರ ಸ್ಮರಣೆ, ಕೃತಿಗಳು ಮತ್ತು ಕೊಡುಗೆಗಳು ಕನ್ನಡಿಗರಲ್ಲಿ ಸದಾಕಾಲ ಜೀವಂತವಾಗಿರುತ್ತವೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಸಿದ್ಧಲಿಂಗ ಕಿಣಗಿ ಮಾತನಾಡಿ ಲೇಖಕ, ಬರಹಗಾರ, ಕಾದಂಬರಿಕಾರಡಾ.ಎಸ್.ಎಲ್. ಭೈರಪ್ಪ ಅವರು ವ್ಯಾಪಕ ಸಂಶೋಧಕರಾಗಿದ್ದರು ಮತ್ತು ಸಮಗ್ರಅಧ್ಯಯನಕಾರರಾಗಿದ್ದರು, ಅವರುತಮ್ಮ ಕಾದಂಬರಿಗಳನ್ನು ಬರೆಯುವ ಮೊದಲು ವಿಷಯಕ್ಕೆ ಪೂರಕವಾದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಮತ್ತು ಸಾಕಷ್ಟು  ತಯಾರಿ ಮಾಡಿಯೇ ಬರೆಯಲು ಸಜ್ಜಾಗುತ್ತಿದ್ದುದರಿಂದ ಅವರ ಜಗತ್ತಿಗೆ ಓದುಗರನ್ನು ಕರೆದೊಯ್ಯಲು ಸಾಧ್ಯವಾಯಿತು ಎಂದರು

ಈ ಸಂದರ್ಭದಲ್ಲಿ ಸಾಹಿತಿ ಕೆ.ಎಚ್.ಸೋಮಾಪುರ, ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ, ಪ್ರೌಢಶಾಲಾದೈಹಿಕ ಶಿಕ್ಷಕರ ಸಂಘದಅಧ್ಯಕ್ಷ ಎಂ.ಎಂ.ಕೆಂಭಾವಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ಬಿರಾದಾರ, ಬಿ.ಎಸ್.ಅರಳಗುಂಡಗಿ ವೇದಿಕೆ ಮೇಲಿದ್ದರು. ಸಾಹಿತಿ ಅಶೋಕ ಬಿರಾದಾರ ನಿರೂಪಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಶರಣಗೌಡ ಬಿರಾದಾರ, ರಮೇಶ ಗಾಯಕವಾಡ, ಸಭಿಯಾ ಮರ್ತುರ, ರಾಘವೇಂದ್ರ ನಾಯ್ಕ, ಶರಣು ನಂದ್ಯಾಳ, ಸಂಗಮೇಶ ಕರಡಿ, ಙ. ಊ. ಹೊಸಮನಿ, ಈಶ್ವರ ಭಜಂತ್ರಿ, ಮಲ್ಲಮ್ಮ ಕಂಬಾರ, ಶ್ರೀಮತಿ ಪೂಜಾ ಕರ್ನಾಳ, ಸುನಿತಾ ಮಾಳೇಗಾರ, ಜಯಶ್ರೀ ಚಲವಾದಿ, ವಿಜಯಲಕ್ಷ್ಮಿ ಪಾಟೀಲ, ಸಿದ್ದಮ್ಮ ಹರವಾಳ ಭಾರತಿ ಅಗಸರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group