ದಲಿತ ವ್ಯಕ್ತಿ ಕೊಲೆ ಪ್ರಕರಣ : ಆರನೇ ದಿನಕ್ಕೆ ಕಾಲಿಟ್ಟ ಧರಣಿ

Must Read

ಸಿಂದಗಿ; ತಾಲೂಕಿನ ಬನ್ನಟ್ಟಿ ಪಿಎ ಗ್ರಾಮದಲ್ಲಿ ದಲಿತ ವ್ಯಕ್ತಿಯ ಕೊಲೆಯ ಪ್ರಕರಣದ ಕುರಿತಾಗಿ ಡಾ. ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆಸಿದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಡಿದ್ದು ಇಂದಿಗೆ ೬ ನೇ ದಿನಕ್ಕೆ ಕಾಲಿಟ್ಟಿದೆ.

ಈ ಸಂದರ್ಭದಲ್ಲಿ ಪ್ರಕಾಶ ಗುಡಿಮನಿ, ಶ್ರೀನಿವಾಸ ಓಲೇಕಾರ, ಶರಣು ಸಿಂಧೆ, ಪರಸು ದಿಂಡವಾರ, ಸುಭದ್ರಾ ಮೇಲಿನಮನಿ ಮಾತನಾಡಿ, ಕಳೆದ ಮೇ೩೧ಕ್ಕೆ ಮಹಾದೇವಪ್ಪ ಹರಿಜನ ಎಂಬುವವರ ಕೊಲೆಯಾಗಿ ಜು.೩ಕ್ಕೆ ಹೆಣವಾಗಿ ಸಿಕ್ಕಿದ್ದು ಅಂದಿನಿಂದ ಇಂದಿನವರೆಗೆ ಪೊಲೀಸ ಇಲಾಖೆ ಕೈಕಟ್ಟಿ ಕುಳಿತಿದೆ. ಎಂತಹ ದೊಡ್ಡ ಪ್ರಕರಣಗಳು ೨೪ ಗಂಟೆಗಳಲ್ಲಿ ಹಿಡಿದು ಸಾಬೀತು ಪಡಿಸಿದ ಪೊಲೀಸ ಇಲಾಖೆಗೆ ಈ ಪ್ರಕರಣ ದೊಡ್ಡ ವಿಷಯವಲ್ಲ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಈ ಪ್ರಕರಣ ಕುರಿತಂತೆ ಬನ್ನೆಟ್ಟಿ ಗ್ರಾಮದಿಂದ ಕಾಲ್ನಡಿಗೆಯಿಂದ ಸಿಂದಗಿಯ ಡಾ ಅಂಬೇಡ್ಕರ ವೃತ್ತದಲ್ಲಿ ದರಣಿ ಕುಳಿತು ೬ ದಿನಗಳು ಗತಿಸಿದರು ಈ ಇಲಾಖೆಗೆ ಮಾನವೀಯತೆ ಕಾಣುತ್ತಿಲ್ಲ ಈ ಪ್ರಕರಣ ಇತ್ಯರ್ಥವಾಗುವವರೆಗು ಧರಣಿ ಕೈ ಬಿಡುವ ಮಾತೆಯಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ದಲಿತ ಸೇನೆಯ ಜಿಲ್ಲಾ ಅಧ್ಯಕ್ಷ ರವಿ ಹೋಳಿ ಭಂಟನೂರ ಮಾತನಾಡಿ, ಮಾನವೀಯತೆಯ ನೆಲೆಗಟ್ಟಿನ ಮೇಲೆ ಸೌಜನ್ಯಕ್ಕೂ ಸಾವಿನ ಮನೆಗೆ ಭೇಟಿ ಕೊಡದ ಮಾಜಿ ಶಾಸಕರು ಮತ್ತು ಹಾಲಿ ಶಾಸಕರಿಗೆ ಧಿಕ್ಕಾರವಿರಲಿ, ದೀನದಲಿತರ ಹಿಂದುಳಿದವರ ಮತಗಳನ್ನು ಪಡೆದು ಅವರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. ದಲಿತರ ಹಿಂದುಳಿದವರ ಕೊಲೆಗಳಾದಾಗ ಯಾವೊಬ್ಬ ರಾಜಕಾರಣಿಯು ಮುಂದೆ ಬಂದು ಸಾಂತ್ವನ ಹೇಳುವಂಥ ಮಾನವೀಯತೆ ಇಲ್ಲದಿರುವುದು ವಿಷಾದಕರ ಸಂಗತಿ. ಪೋಲಿಸ್ ಇಲಾಖೆಯ ವಿಳಂಬ ನೀತಿಯ ಧೋರಣೆಯಿಂದ ಮತ್ತು ಕೊಲೆಗಾರರು ಪ್ರಭಾವಿಗಳಾಗಿರುವುದರಿಂದ ಇದರ ಹಿಂದೆ ಕಾಣದ ಕೆಲವು ಮಂತ್ರಿಗಳ ಕೈವಾಡವಿದೆ ಎಂದು ತಿಳಿದು ಬರುತ್ತದೆ, ಕೊಲೆಗಾರರು ಯಾವುದೇ  ಸಮುದಾಯದವರಾಗಿರಲಿ ಅಥವಾ ಸ್ವ ಜಾತಿಯವರು ಆಗಿರಲಿ ಅವರು ಎಷ್ಟೆ ಪ್ರಭಾವಗಳಿದ್ದರೂ ಅವರನ್ನು ಪೊಲೀಸರು ಶೀಘ್ರವೇ ಬಂಧಿಸಿ ಹೆಡೆಮುರಿಕಟ್ಟಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಮುಂದಿನ ದಿನಗಳಲ್ಲಿ ದಲಿತರು ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮೇಲೆ ಯಾವುದೇ ರೀತಿಯ ದೌರ್ಜನ್ಯವಾಗಬಾರದು. ಇಡೀ ಸಿಂದಗಿ ತಾಲೂಕಿನ ಒಂದು ೧೦೬ ಹಳ್ಳಿ ಮತ್ತು ೧೬ ತಾಂಡಗಳ ಬಡಜನರ ಮೇಲೆ ದೌರ್ಜನ್ಯ ನಡೆದರೆ ನಾವು ಸುಮ್ಮನೆ ಇರಲ್ಲ ಎಂಬ ಎಚ್ಚರಿಕೆ ಇರಲಿ ಇದಕ್ಕೆ ಈ ಬೃಹತ್ ಹೋರಾಟವೇ ಜೀವಂತ ಸಾಕ್ಷಿ ಎಂದು  ಖಡಕ್ ಎಚ್ಚರಿಕೆ ನೀಡಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group