ದೀಪಾವಳಿ ನೇಮೋತ್ಸವ -ಆಮಂತ್ರಣ ಪತ್ರಿಕೆ ಬಿಡುಗಡೆ

Must Read

ಕಾಸರಗೋಡು : ಕಾಸರಗೋಡು ಕೋಟೆ ಬಾಗಿಲಿನಲ್ಲಿರುವ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವ ಕೋಲ ವರ್ಷಮ್ರತಿ, ಕಾಸರಗೋಡು ಕೋಟೆ ನಾಯಕರ ಮನೆತನದವರು, ಸಮಾಜದವರು, ಹಾಗೂ ಊರವರ ಸಹಕಾರದೊಂದಿಗೆ ದೀಪಾವಳಿ ದಿನದಂದು, ಪಳ್ಳದಕೊಟ್ಯ ತರವಾಡಿನಿಂದ ವೈಭವದಿಂದ ಬಂಡಾರ ಮೆರವಣಿಗೆ ಮೂಲಕ ಬಂದು ನಡೆಯುವುದು ಪ್ರಾಚೀನದಿಂದ ನಡೆದು ಬರುವುದು ಇತಿಹಾಸ.

ಈ ಐತಿಹಾಸಿಕ ಪರಂಪರೆಯ ಶ್ರೀ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವಕೋಲದ ಆಮಂತ್ರಣ ಪತ್ರಿಕೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ ನಡೆಯುತ್ತಿರುವ ಕಾಸರಗೋಡು ದಸರಾ ಸಂಭ್ರಮ ವೇದಿಕೆಯಲ್ಲಿ ಬಿಡುಗಡೆ ಗೊಳಿಸಲಾಯಿತು.

ಕೋಟೆ ನಾಯಕರ ಕುಲ ದೇವಸ್ಥಾನ ಸಮಿತಿ ಅಧ್ಯಕ್ಷರಾದ ನಾಗೇಶ್ ಪಿ. ನಾಯಕ್ ಅವರು ಪೇಟೆ ಮಲ್ಲಿಕಾರ್ಜುನ ದೇವಾಲಯದ ಆಡಳಿತ ಸಮಿತಿಯ ಡಾ. ವೆಂಕಟ್ರಮಣ ಹೊಳ್ಳರಿಗೆ ನೀಡಿ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು. ಕಾರ್ಯಕ್ರಮ ದಲ್ಲಿ ಪಾಂಗೋಡು ಪ್ರವೀಣ ನಾಯಕ, ಕೋಟೆ ದೂಮಾವತಿ ಉತ್ಸವ ಸಮಿತಿ ಅಧ್ಯಕ್ಷ ನವೀನ್ ನಾಯಕ, ಕೋಶಾಧಿಕಾರಿ ಡಾ. ವಾಮನ್ ರಾವ್ ಬೇಕಲ್, ಜಯಾನಂದ ಕುಮಾರ್, ಅರಿಬೈಲ್ ಗೋಪಾಲ ಶೆಟ್ಟಿ, ಶ್ರೀಧರ್ ಶೆಟ್ಟಿ ಮುಟ್ಟಮ್, ಅಖಿಲೇಶ ನಗುಮುಗಮ್, ವೀಜಿ ಕಾಸರಗೋಡು, ಜಗನ್ನಾಥ್ ಶೆಟ್ಟಿ ಪಿ. ಕೆ, ವಿಶಾಲಾಕ್ಷ ಪುತ್ರಕಳ, ಶ್ರೀಕಾಂತ ನಾಯಕ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯರ್ ಜಿಲ್ಲಾಧ್ಯಕ್ಷ ಪ್ರದೀಪ್ ಬೇಕಲ್ ಇದ್ದರು.

ಸಾಮಾಜಿಕ ಮುಂದಾಳು  ಜಗದೀಶ್ ಕೂಡ್ಲು ನಿರೂಪಿಸಿದರು ಪ್ರದೀಪ್ ನಾಯಕ್ ಸ್ವಾಗತಿಸಿ, ರಮೇಶ ಕುಂಬಳೆ ಧನ್ಯವಾದ ಹೇಳಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group