ದೇಶ ಕಟ್ಟುವ ವಿಶ್ವದ ಅತಿ ದೊಡ್ಡ ರಾಜಕೀಯೇತರ ಸಂಘಟನೆ ಆರ್ ಎಸ್ ಎಸ್

Must Read
ರಾಷ್ಟ್ರೀಯ ಸ್ವಯಂಸೇವಕ ಸಂಘ – ಶತಮಾನದ ಸಂಭ್ರಮ 
    ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಸ್ವಾತಂತ್ರ್ಯದ ಮೊದಲು ಭಾರತವನ್ನು ಏಕೀಕರಿಸಿ, ರಾಷ್ಟ್ರೀಯ ಚಿಂತನೆ ಮತ್ತು ಸಂಸ್ಕೃತಿಯ ಪ್ರಗತಿಯಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದು ಶತಮಾನೋತ್ಸವದ ಗರಿಮೆಯನ್ನು ಮುಟ್ಟಿದೆ.

ಭ್ರಾತೃತ್ವವೇ ಮಂತ್ರವಾಗಿ,ಪ್ರಸಿದ್ಧಿಗಲ್ಲ, ಸೇವೆಗೆ ಬದ್ಧವಾಗಿದೆ, ಕಸರತ್ತು- ಶಿಸ್ತು ದಿನನಿತ್ಯ ಇಲ್ಲಿದೆ,ಮೌಲ್ಯಗಳ ಬೃಹತ್ ಖಜಾನೆಯಾಗಿದೆ,ರಾಷ್ಟ್ರೀಯತೆ ನರನಾಡಿಯಲ್ಲಿದೆ, ಹಿಂದುತ್ವದಲ್ಲಿ ದೃಢ ನಂಬಿಕೆ ಇದೆ, ಸಂಸ್ಕೃತಿಯ ರಾಯಭಾರಿಯಾಗಿ,ಭಾರತೀಯರಿಗೆ ಆರಾಧ್ಯವಾಗಿ,ಯುವಕರಿಗೆ ಸ್ಫೂರ್ತಿಯಾಗಿ,
ಸಂಘಟನಾ ಶಕ್ತಿಗೆ ಇನ್ನೊಂದು ಹೆಸರಾಗಿದೆ  ಎಂದು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಪ್ರಾಯಪಟ್ಟರು.

ಬೆಂಗಳೂರು ಶಂಕರಪುರಂ ನಗರದ ರಾಘವೇಂದ್ರ ವಸತಿ ವತಿಯಿಂದ ಚಾಮರಾಜಪೇಟೆಯ ಆದರ್ಶ ಕಾಲೇಜಿನಲ್ಲಿ  ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕ ಸುಧಾಕರ್ ವಿಶೇಷ ಬೌದ್ಧಿಕ ನಡೆಸಿಕೊಟ್ಟರು ,ಡಾ .ಕೃಷ್ಣಮೂರ್ತಿ ರವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗಣವೇಷಧಾರಿಗಳಾದ ಸ್ವಯಂಸೇವಕರು ಭಾಗವಹಿಸಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group