Homeಸುದ್ದಿಗಳುಎಮ್ಈಎಸ್ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಡಾ. ವಿಠ್ಠಲ ಆರ್. ದೇವರಡ್ಡಿ ನೇಮಕ

ಎಮ್ಈಎಸ್ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಡಾ. ವಿಠ್ಠಲ ಆರ್. ದೇವರಡ್ಡಿ ನೇಮಕ

spot_img

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿ.ಸಿ.ಎ. ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಮಹಾವಿದ್ಯಾಲಯದ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ. ವ್ಹಿ. ಆರ್. ದೇವರಡ್ಡಿಯವರು ನೇಮಕಗೊಂಡಿದ್ದಾರೆ.

ಹಿಂದಿನ ಪ್ರಾಚಾರ್ಯರಾದ ಡಾ. ಎಸ್. ಎಲ್. ಚಿತ್ರಗಾರ ಅವರ ವಯೋನಿವೃತ್ತಿ ನಂತರ ಅವರ ಸ್ಥಾನಕ್ಕೆ ದೇವರಡ್ಡಿಯವರ ನೇಮಕವಾಗಿದೆ.

ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ವ್ಹಿ. ಆರ್. ಸೋನವಾಲ್ಕರ ಹಾಗೂ ಉಪಾಧ್ಯಕ್ಷರಾದ ಆರ್. ಪಿ. ಸೋನವಾಲ್ಕರ ಅವರು ದೇವರಡ್ಡಿ ಅವರಿಗೆ ನೇಮಕ ಆದೇಶವನ್ನು ನೀಡಿ ನಿಮ್ಮ ಅಧಿಕಾರವಧಿಯಲ್ಲಿ ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಸಂಸ್ಥೆಯ ಹೆಸರು ತರಬೇಕು ಅದಕ್ಕೆ ಬೇಕಾದ ಸಹಾಯ ಸಹಕಾರಕ್ಕೆ ಸಂಸ್ಥೆ ನಿಮ್ಮ ಬೆನ್ನ ಹಿಂದೆ ಸದಾ ಇರುತ್ತದೆ ಎಂದು ಶುಭ ಹಾರೈಸಿದರು.

ಅಧಿಕಾರ ಸ್ವೀಕರಿಸಿದ ನೂತನ ಪ್ರಾಚಾರ್ಯರಾದ ಡಾ. ವಿಠ್ಠಲ ದೇವರಡ್ಡಿ ಮಾತನಾಡಿ ಆಡಳಿತ ಮಂಡಳಿ ನನ್ನ ತಂದೆ ತಾಯಿ ಸಮಾನ ಅವರ ಆಜ್ಞೆ ಹಾಗೂ ಮಾರ್ಗದರ್ಶನದಲ್ಲಿ ಸಂಸ್ಥೆಯ ಏಳ್ಗೆಗೆ ಶ್ರಮಿಸುವುದಾಗಿ ಹಾಗೂ ನನ್ನ ಕೆಲಸ ಕಾರ್ಯಗಳಲ್ಲಿ ಸಿಬ್ಬಂದಿಯವರ ಸಹಕಾರ ಕೋರುವುದಾಗಿ ಹೇಳಿದರು.

ನಿವೃತ್ತ ಪ್ರಾಚಾರ್ಯರಾದ ಡಾ. ಎಸ್. ಎಲ್. ಚಿತ್ರಗಾರ ನನ್ನ ಅಧಿಕಾರಾವಧಿಯಲ್ಲಿ ನೀಡಿದ ಸಹಾಯ ಸಹಕಾರ ದೇವರಡ್ಡಿಯವರಿಗೂ ನೀಡಬೇಕೆಂದು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರಲ್ಲಿ ಕೋರಿಕೊಂಡರು. ಈ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿವರ್ಗ ಹಾಗೂ ನಿವೃತ್ತ ಪ್ರಾಧ್ಯಾಪಕ ವರ್ಗ ಉಪಸ್ಥಿತರಿದ್ದು, ದೇವರಡ್ಡಿ ಶುಭ ಕೋರಿದರು ಡಾ. ಎಸ್. ಎಲ್. ಚಿತ್ರಗಾರ ಸ್ವಾಗತಿಸಿ ನಿರೂಪಿಸಿ ಕೊನೆಗೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group