ಆಯೋಜನೆ : ವಿಶ್ವ ಮಧ್ವಮತ ವೆಲ್‌ಫೇರ್ ಅಸೋಸಿಯೇಷನ್
ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ಬೆಂಗಳೂರು ಗಾಂಧಿ ಬಜಾರ್ ಶ್ರೀ ವ್ಯಾಸರಾಜ ಮಠದಲ್ಲಿ ೫ನೇ ವರ್ಷದ ‘ಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವ ಮಧ್ವಮತ ವೆಲ್‌ಫೇರ್ ಅಸೋಸಿಯೇಷನ್ ಆಯೋಜಿಸಿತ್ತು.
ಸಭಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಕೋಲಾರ ಜಿಲ್ಲೆ ತಂಬಿಹಳ್ಳಿ ಶ್ರೀ ಮಾಧವತೀರ್ಥ ಮಠದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರು ವಹಿಸಿ ಧರ್ಮಶಾಸ್ತ್ರ ಅಧ್ಯಯನಕ್ಕಾಗಿ ಅನೇಕಲ್‌ನ ಕೆ.ವಿ. ಲಕ್ಷ್ಮಿನಾರಾಯಣಾಚಾರ್ಯ ,ಲೆಕ್ಕ ಪರಿಶೋಧಕ ಸಿಎ ಸಿ. ಆರ್. ಮುರಳಿ , ವಿದ್ವಾನ್ ಶ್ರೀನಿಧಿ ಆಚಾರ್ಯ ಉತ್ತನೂರು ಮತ್ತು ವಿದ್ವಾನ್ ಸುಘೋಷಾಚಾರ್ಯ ರವರುಗಳಿಗೆ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು,
ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯಅತಿಥಿಗಳಾಗಿ ಮಾತನಾಡುತ್ತ ಆಧುನಿಕ ಜೀವನದಲ್ಲಿ ಮಧ್ವಸಿದ್ಧಾಂತದ ಪ್ರಸ್ತುತತೆ ,ಕನ್ನಡನಾಡಿನ ಹೆಮ್ಮೆಯ ಆಚಾರ್ಯರಾದ ವಿಶ್ವಗುರು ಮಧ್ವಾಚಾರ್ಯರ ಸಂದೇಶದ ಪ್ರಸಾರ ತನ್ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೈಂಕರ‍್ಯ ಮಾಡುತ್ತಿರುವ ವಿಶ್ವ ಮಧ್ವ ಮತ ವೆಲ್ಫೇರ್ ಅಸೋಸಿಯೇಷನ್ ಕಾರ‍್ಯ ಅಭಿನಂದನೀಯ ಎಂದು ತಿಳಿಸಿದರು.
ಶ್ರೀಮಧ್ವ ಜಯಂತಿಯ ಪರ್ವಕಾಲದಲ್ಲಿ ಬಸವನಗುಡಿ ನವಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಗಾಂಧಿ ಬಜಾರ್ ಸೋಸಲೇ ವ್ಯಾಸರಾಜ ಮಠದವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಾ.ಜಿ.ನಾಗೇಂದ್ರ ರವರ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ , ವಿಎಂಡಬ್ಲ್ಯೂಎ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ವೆಂಕೋಬ ರಾವ್ ,ರಾಷ್ಟ್ರೀಯ ಅಧ್ಯಕ್ಷ , ರಾಘವೇಂದ್ರ ಪ್ರಸಾದ್ ಕೋಟಿ ಮತ್ತು ರಾಜ್ಯಾಧ್ಯಕ್ಷ ಶ್ರೀನಿವಾಸ ಜೋಷಿ ಮೊದಲಾದವರು ವೇದಿಕೆಯಲ್ಲಿದ್ದರು.