ಮೂಡಲಗಿ -ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಶಿಫಾರಸ್ಸು ಮಾಡಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವವೇದಿಕೆ ಮೂಡಲಗಿ ತಾಲೂಕು ವಿಭಾಗದಿಂದ,ತಾಲೂಕು ದಂಡಾಧಿಕಾರಿಗಳು ಶ್ರೀಶೈಲ ಗುಡಮೆ ಮೂಡಲಗಿ ಇವರ ಮುಖಾಂತರ ಮನವಿ ಸಲ್ಲಿಸಲಾಯಿತು.
ಗೌರವ ಅಧ್ಯಕ್ಷರಾದ ಲಕ್ಕಪ್ಪ ಶಾಬನ್ನವರ, ಅಧ್ಯಕ್ಷರಾದ ರೇವಣ್ಣ ಮುನ್ಯಾಳ, ಸಂಘಟನಾ ಕಾರ್ಯದರ್ಶಿಯಾದ ಪರಶುರಾಮ್ ಭೀಷ್ಟಣ್ಣವರ, ಸಮಾಜದ ಹಿರಿಯರಾದ ಸುರೇಶ ಮಗದುಮ್, ಸದಸ್ಯರಾದ ಪಾಂಡುರಂಗ ಮಲ್ಲಪ್ಪ ಕುರಿ, ಬನಪ್ಪ ಗಾಡದವರ, ಲಕ್ಷ್ಮಣ ನಂದಿ, ಬನಪ್ಪ ವಡೆರ ಉಪಸ್ಥಿತರಿದ್ದರು