Homeಸುದ್ದಿಗಳುಸಾಹಿತಿ ರುಕ್ಮೋದ್ದೀನ್ ಇಸ್ಲಾಂಪುರರಿಗೆ ಶೃದ್ಧಾಂಜಲಿ

ಸಾಹಿತಿ ರುಕ್ಮೋದ್ದೀನ್ ಇಸ್ಲಾಂಪುರರಿಗೆ ಶೃದ್ಧಾಂಜಲಿ

spot_img

ಹುಮನಾಬಾದ:- ಪಟ್ಟಣದ ಸಾರಿಗೆ ಬಸ್ ನಿಲ್ದಾಣದೊಳಗೆ ಪ್ರಭಾಕರ್ ಪತ್ರಿಕಾ ವಿತರಕರು ಹಾಗೂ ಸಾಹಿತ್ಯ ಅಭಿಮಾನಿಗಳ ಬುಕ್ ಸ್ಟಾಲಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹುಮ್ನಾಬಾದ್ ಹಾಗೂ ವಿವಿಧ ಕನ್ನಡ ಪರ ಸಾಹಿತಿಗಳು ಸೇರಿ ಕಲ್ಯಾಣ ಕರ್ನಾಟಕದ ಸಾಹಿತಿಗಳಾದ  ರುಕ್ಮೋದ್ದೀನ್ ಇಸ್ಲಾಂಪೂರ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯರು ಸಾಹಿತಿಗಳಾದ ಶಿವಶಂಕರ ತರ್ನಳ್ಳಿಯವರು ಮಾತನಾಡಿದ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಒಬ್ಬ ಹಿರಿಯ ಸಾಹಿತಿ ರುಕ್ಮೋದ್ದೀನ್ ಇಸ್ಲಾಂಪೂರ ಅವರು ಬೀದರ ಜಿಲ್ಲೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಸಮ್ಮೇಳನಗಳಲ್ಲಿ ಭಾಗಿಯಾಗಿ, ಸಾಹಿತಿಗಳಿಗೆ ಬೆಳೆಸಿದ, ಅಲ್ಲದೇ ಕನ್ನಡಕ್ಕೆ ಅವರ ಕೊಡುಗೆ ಅಪಾರವಿದೆ ಎಂದು ನುಡಿದರು

ಆಯ್ .ಎಸ್. ಶಕಿಲ್ ಸಾಹಿತಿಗಳು ಮಾತನಾಡಿ
ಕಲ್ಯಾಣ ಕರ್ನಾಟಕ ಭಾಗದ ಒಬ್ಬ ಸಾಹಿತ್ಯ ರತ್ನವನ್ನು ಕಳೆದುಕೊಂಡಂತಾಗಿದೆ. ರುಕುಮುದ್ದಿನ ರವರು ಹತ್ತು ಪುಸ್ತಕಗಳು ಬರೆದು ಗಡಿನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಅಕಾಲಿ ಮರಣ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನುಡಿದರು.

ರುಕುಮುದ್ದಿನ ಸಾಹಿತಿಗಳು ಸರಕಾರಿ ಸಾರಿಗೆ ಸಾರಿಗೆ ಇಲಾಖೆ ಅಧಿಕಾರಿಯಾಗಿ ಅವರು ನಿಷ್ಠಾವಂತರಾಗಿ ಕಾಯಕವನ್ನು ಮಾಡುತ್ತ ಬೇದಭಾವ ಇಲ್ಲದೆ ಸಾಹಿತ್ಯ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.. ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಚಟ್ಟಿ ರುಕುಮುದ್ದಿನವರ ಕವನ ವಾಚನ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಪ್ರಭಾಕರ ಕುಲಕರ್ಣಿ, ಕಸಾಪ ಮಾಜಿ ಅಧ್ಯಕ್ಷರಾದ ವೀರಂತರೆಡ್ಡಿ ಜಂಪಾ, ರವೀಂದ್ರ ಭಂಡಾರಿ, ಸಾರಿಗೆ ಇಲಾಖೆಯ ನಾರಾಯಣ ರೆಡ್ಡಿ ಟ್ರಾಫಿಕ್ ಸಂಚಾರಿ,ಹಣಮಂತ ಚಾಲಕರು, ಸುಖಾನಂದ ಚಾಲಕರು, ಮಲ್ಲಾರೆಡ್ಡಿ ನಿರ್ವಾಹಕರು, ಹಾಗೂ ಮಾರುತಿ ಸಂಚಾರಿ ನಿಯಂತ್ರಕರು ಉಪಸ್ಥಿತರಿದ್ದರು.

ಕಸಾಪ ಮಾಜಿ ಅಧ್ಯಕ್ಷರು ವೀರಂತ ರೆಡ್ಡಿ ಜಂಪಾ ಮಾತನಾಡಿ ರುಕ್ಮೋದ್ದಿನ್ ಇಸ್ಲಾಂಪೂರ ರವರನ್ನು ಕನ್ನಡಾಭಿಮಾನಿಗಳು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೋಡಬೇಕೆನ್ನುವ ತವಕದಲ್ಲಿ ಇದ್ದರು.ಆದರೇ ವಿಧಿ ಅವರನ್ನು ಇಂದು ಇಲ್ಲವಾಗಿಸಿ ನಮ್ಮ ಭಾಗದ ಒಬ್ಬ ಸಾಹಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದರು. ಈ ಸಂದರ್ಭದಲ್ಲಿ ಅನೇಕ ಅವರ ಹಿತೈಷಿಗಳು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group