Homeಸುದ್ದಿಗಳುವಜ್ರ ಮಹೋತ್ಸವ ಗುರುವಂದನ - ಗೌರವ ಸೇವೆಯ ಶಿಕ್ಷಕರ ಮಹಾ ಸಮ್ಮಿಲನ

ವಜ್ರ ಮಹೋತ್ಸವ ಗುರುವಂದನ – ಗೌರವ ಸೇವೆಯ ಶಿಕ್ಷಕರ ಮಹಾ ಸಮ್ಮಿಲನ

spot_img

ಶಿಕ್ಷಕರೇ ದೇಶದ ಭದ್ರ ಬುನಾದಿ

ಬೆಂಗಳೂರು ನಗರದ ಕೆಂಪೇಗೌಡ ನಗರ ಗವಿಪುರ ಛತ್ರಗಳ ಎದುರಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಕೃತಿ -ಸಾಹಿತ್ಯ -ಸಮಾಜ ಸೇವಾ ಸಂಸ್ಥೆ ಉದಯ ಭಾನು ಕಲಾಸಂಘದಲ್ಲಿ 1981ಮೊದಲ ತಂಡದ ಎಸ್ ಎಸ್ ಎಲ್ ಸಿ ಪಾಠ ಪ್ರವಚನಗಳ ತರಗತಿಗಳ ಶಿಕ್ಷಕರಿಗೆ ಮತ್ತು 2025 – 26 ನೇ ಸಾಲಿನ ಎಸ್ ಎಸ್ ಎಲ್ ಸಿ- ದ್ವಿತೀಯ ಪಿಯುಸಿ ವಿಜ್ಞಾನ- ವಾಣಿಜ್ಯ- ಕಲೆ ತರಗತಿಗಳ ಗೌರವ ಸೇವೆಯ ಉಪನ್ಯಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು

ಪದ್ಮಶ್ರೀ ಪುರಸ್ಕೃತ ಶಿಕ್ಷಕ ಪ್ರೊ. ಎಂ ಕೆ ಶ್ರೀಧರ ಅಭಿನಂದನ ಮಾತನಾಡುತ್ತ ನಾಲ್ಕು ತಲೆಮಾರಿನ ಶಿಕ್ಷಕರ ಅಪರೂಪದ ಸಮ್ಮಿಲನ ಇದಾಗಿದ್ದು ಗುರು ಶಿಷ್ಯ ಪರಂಪರೆಯ ಭವ್ಯದ್ಯೋತಕವಾಗಿ ಈ ಕಾರ್ಯಕ್ರಮ ಸಾಕ್ಷಿಯಾಯ್ತು ,ಭವಿಷ್ಯದ ಪೀಳಿಗೆಗೆ ಶಿಕ್ಷಣ ನೀಡುವ ಜವಾಬ್ದಾರಿಯು ಸಾಮಾನ್ಯವಾದುದಲ್ಲ. ಇಂಥ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿರುವ ಶಿಕ್ಷಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು .

ಸಂಘದ ಅಧ್ಯಕ್ಷ ರಾಮೇಗೌಡ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಾಗ್ಮಿ ,ಕನ್ನಡ ಚಿಂತಕ ಡಾ. ನಾ ಸೋಮೇಶ್ವರ, ಒಂದು ಒಳ್ಳೆಯ ಸಮಾಜ ನಿರ್ಮಾಣವಾಗಬೇಕೆಂದರೆ ಶಿಕ್ಷಕರ ಕೊಡುಗೆ ಅಪಾರವಾದದ್ದು. ವಿದ್ಯಾರ್ಥಿಗಳ ಭವಿಷ್ಯದ ಸದಾ ಚಿಂತಿಸುವ, ತಮ್ಮ ವಿದ್ಯಾರ್ಥಿಗಳ ಸಾಧನೆ ನೋಡಿ ನಮ್ಮ ಮಕ್ಕಳೇ ಸಾಧನೆ ಮಾಡಿದಷ್ಟು ಖುಷಿ ಪಡುವವರೇ ಗುರುಗಳು ಎಂದು ತಿಳಿಸಿದರು .

ವಿಧಾನ ಪರಿಷತ್ ಸದಸ್ಯ ಹೆಚ್ಎಸ್ ಗೋಪಿನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು .ಹಿರಿಯ ಶಿಕ್ಷಣ ತಜ್ಞ ಡಾ . ಕೆ ಎಸ್ ಸಮೀರ ಸಿಂಹ ,ಜನಪ್ರಿಯ ಶಿಕ್ಷಕ ಬಿ ವಿ ನಾಗರಾಜು , ಗೋಪಣ್ಣ, ಹೆಗಡೆ, ನಿವೃತ್ತ ಕನ್ನಡ ಅಧ್ಯಾಪಕ ಬಿ. ಶಂಕರ ಲಿಂಗೇಗೌಡ , ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ ಕೆ. ವಿ. ರಾಮರಾವ್ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ಮತ್ತು ಬಿ ವಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group