Homeಸುದ್ದಿಗಳುಬಸವೇಶ್ವರ ಸೊಸಾಯಿಟಿಯಿಂದ ಪ್ರಭಾ ಶುಗರ‍್ಸ್  ಅಧ್ಯಕ್ಷ-ಉಪಾಧ್ಯಕ್ಷರಿಗೆ ಸತ್ಕಾರ

ಬಸವೇಶ್ವರ ಸೊಸಾಯಿಟಿಯಿಂದ ಪ್ರಭಾ ಶುಗರ‍್ಸ್  ಅಧ್ಯಕ್ಷ-ಉಪಾಧ್ಯಕ್ಷರಿಗೆ ಸತ್ಕಾರ

spot_img

ಮೂಡಲಗಿ:-   ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ-ಉಪಾಧ್ಯಕ್ಷರು ನಿಧನರಾದ ಪ್ರಯುಕ್ತ ತೆರವಾಗಿದ್ದ ಸ್ಥಾನಕ್ಕೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ತಾಲೂಕಿನ ಜೋಕಾನಟ್ಟಿಯ ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ರಂಗಾಪೂರದ ಮಲ್ಲಿಕಾರ್ಜುನ ಭೀಮಪ್ಪ ಕಬ್ಬೂರ ಅವರನ್ನು ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ಮತ್ತು ಮಂಡಳಿಯವರು ಸೊಸಾಯಿಟಿಯ ಸಭಾ ಭವನದಲ್ಲಿ ಸೋಮವಾರದಂದು ಸತ್ಕರಿಸಿ ಗೌರವಿಸಿದರು.

ಸತ್ಕಾರ ಸ್ವೀಕರಿಸಿದ ಕಾರ್ಖಾನೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರ ಮಾತನಾಡಿ, ಈ ಭಾಗದ ರೈತರ ಆಶಾಕಿರಣವಾದ ಘಟಪ್ರಭಾ ಶುರ‍್ಸ್ ಕಾರ್ಖಾನೆಗೆ ನಮ್ಮನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಅರಭಾವಿ ಶಾಸಕ ಬಾಲಚಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಾರಕಿಹೊಳಿ ಸಹೋದರ ಮಾರ್ಗದರ್ಶನದಲ್ಲಿ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುವದಾಗಿ ಭರವಸೆ ನೀಡಿದರು

ಈ ಸಂದರ್ಭದಲ್ಲಿ ಸೊಸಾಯಿಟಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಢವಳೇಶ್ವರ, ನಿರ್ದೇಶಕರಾದ ಗಿರೀಶ ಢವಳೇಶ್ವರ, ಚನ್ನಬಸಪ್ಪ ಬಡ್ಡಿ, ಬಸವರಾಜ ತೇಲಿ, ಶ್ರೀಕಾಂತ ಹಿರೇಮಠ, ಶ್ರೀಶೈಲ ಮದಗನ್ನವರ, ದೇವಪ್ಪ ಕೌಜಲಗಿ, ಪುರಸಭೆ ಸದಸರಾದ ವಿರೂಪಾಕ್ಷ ಮುಗಳಖೋಡ, ಮುಖಂಡರಾದ ರುದ್ರಪ್ಪ ವಾಲಿ, ಬಿ.ವಾಯ್ ಶಿವಾಪುರ, ಸೊಸಾಯಿಟಿಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group