ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದ ಪಿ ಎಮ್ ಶ್ರೀ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವ ಚಿತ್ರಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜ ಸಸಾಲಟ್ಟಿ ಪೂಜೆ ಸಲ್ಲಿಸಿ ಮಾತನಾಡುತ್ತ ಮಕ್ಕಳಿಗೆ ಮಹರ್ಷಿ ವಾಲ್ಮೀಕಿಯವರ ಜೀವನದ ಬಗ್ಗೆ ತಿಳಿಸಿದರು.
ಕಟುಕನಾಗಿದ್ದ ವಾಲ್ಮೀಕಿ ನಾರದನ ಹಿತವಚನದಿಂದ ಮಹಾಕಾವ್ಯ ರಾಮಾಯಣ ರಚಿಸಿ ಆದಿಕವಿ ವಾಲ್ಮೀಕಿ ಸಮಾಜಕ್ಕೆ ರಾಮ ಚರಿತ್ರೆ ಬಗ್ಗೆ ತಮ್ಮ ಬರವಣಿಗೆ ಮೂಲಕ ತಿಳಿಸಿದರು. ನವ ಋಷಿಗಳ ಸಾಲಿನಲ್ಲಿ ಇವರು ಒಬ್ಬರು. ಒಂದು ಮೇರು ಕೃತಿಯನ್ನು ಕೊಟ್ಟ ಮೊದಲಿಗರು. ಇವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಅಳವಡಿಕೊಳ್ಳಬೇಕೆಂದು ಹೇಳಿದರು.
ಮಹರ್ಷಿ ವಾಲ್ಮೀಕಿಯವರ ಜಯಂತಿಯ ಮುಖ್ಯ ಅತಿಥಿಗಳಾದ ಲಕ್ಷ್ಮಯ್ಯಾ ಸಾಲಿಮಠ ಗುರುಗಳು ಮಕ್ಕಳು ಮಹರ್ಷಿ ವಾಲ್ಮೀಕಿಯವರ ಆದರ್ಶವನ್ನು ಪಾಲಿಸಬೇಕು ಇದರಿಂದ ನೀವು ನಿಮ್ಮ ಜೀವನದಲ್ಲಿ ಏನಾದರು ಸಾಧಿಸಬಹುದು ಎಂದರು.
ಬಿ. ಎಮ್.. ಮೋಮಿನ, ವಿದ್ಯಾಶ್ರೀ ನೇಮಗೌಡರ, ಶೋಭಾ ಪಾಲಭಾವಿ,ಗಂಗಮ್ಮ ಕಂಬಾರ, ರಾಕೇಶ ಹಳ್ಳೂರ ಕವಿತಾ ಕಟಗಿ,ಶಾಲಿನಿ ಹಳ್ಳೂರ ಹಾಗೂ ಮಕ್ಕಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಸುಖದೇವ ದರೂರ ಸರ್ವರನ್ನು ಸ್ವಾಗತಿಸಿ ನಿರೂಪಿಸಿ ಮತ್ತು ವಂದಿಸಿದರು.

