ಬೀದರ – ವೀರಶೈವ ಲಿಂಗಾಯತ ಧರ್ಮವನ್ನು ಪ್ರತ್ಯೇಕವಾಗಿ ನಾವು ಕೇಳಿಲ್ಲ.ಸ್ವಾತಂತ್ರ್ಯ ಪೂರ್ವದಿಂದಲೂ ಪ್ರತ್ಯೇಕ ಧರ್ಮಕ್ಕಾಗಿ ಕೂಗು ಇದೆ. ಈ ವಿಚಾರದಲ್ಲಿ ಕೆಲವರು ವೈರತ್ವ ಮತ್ತು ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ.ನಮ್ಮ ಬಾಯಲ್ಲಿ ಯಾವತ್ತೂ ಅಸತ್ಯ ಮಾತು ಬರೋದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಬಸವಕಲ್ಯಾಣ ದಲ್ಲಿ ಮಾತೆ ಗಂಗಾದೇವಿ ನೇತೃತ್ವದಲ್ಲಿ ನಡೆಯುತ್ತಿರುವ ೨೪ ನೇ ಕಲ್ಯಾಣ ಪರ್ವ ವೇದಿಕೆಯಲ್ಲಿ ಅವರು ಮಾತನಾಡಿದರು.
ಸಮಾಜವನ್ನು ನಾವು ಎಂದಿಗೂ ಸ್ವಾರ್ಥಕ್ಕಾಗಿ ಬಳಸಿಕೊಂಡಿಲ್ಲ ಸಮಾಜಕ್ಕಾಗಿ ನಮ್ಮ ಮೇಲೆ ಪ್ರಹಾರ ಆಗಿದೆ. ಎಲ್ಲ ಪೂಜ್ಯರು ದೊಡ್ಡ ದೊಡ್ಡ ಮಾತು, ಉಪದೇಶ ಹೇಳುತ್ತೀರಿ. ಎಲ್ಲರೂ ಒಗ್ಗಟ್ಟಾಗಿ ಒಮ್ಮನಸ್ಸಿನಿಂದ ಲಿಂಗಾಯತ ಧರ್ಮ ಪ್ರತ್ಯೇಕ ಎಂಬ ಪ್ರಸ್ತಾವನೆ ಕಳುಹಿಸಿ ಎಂದರು.
ಲಿಂಗಾಯತ ಧರ್ಮವನ್ನು ಯಶಸ್ವಿ ಮಾಡಬೇಕಾದರೆ ಒಬ್ಬರಿಗೊಬ್ಬರು ಕಾಲು ಎಳೆಯಬಾರದು. ಆರೋಪ ಪ್ರತ್ಯಾರೋಪ ಮಾಡಿದರೆ ಹೋರಾಟ ಯಶಸ್ವಿ ಯಾಗುವುದಿಲ್ಲ. ನೀವೆಲ್ಲ ಸ್ವಾಮೀಜಿಗಳು ಸೇರಿ ಏನು ನಿರ್ಣಯ ಮಾಡುತ್ತೀರೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಖಂಡ್ರೆ ಹೇಳಿದರು.

