ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ)ಯ ಸರ್ವ ಸದಸ್ಯರ 8ನೇ ವಾರ್ಷಿಕ ಮಹಾಸಭೆಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಿತು.
ಸಭೆಯಲ್ಲಿ ಇತ್ತೀಚೆಗೆ ಕೀರ್ತಿಶೇಷರಾದ ಹಾಸನದ ಹಿರಿಯ ಕಲಾವಿದರಾದ ಚೆಲುವೆಗೌಡರು, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಶಿವಣ್ಣ, ಕಾದಂಬರಿಕಾರರಾದ ಎಸ್. ಎಲ್ ಭೈರಪ್ಪ,, ಗಾಯಕರಾದ ಹಾಸನ ಬಾಬು ಹಾಗೂ ಹರಿಕಥಾ ವಿದ್ವಾಂಸರು ಹಾಗೂ ಪೌರಾಣಿಕ ರಂಗ ನಿರ್ದೇಶಕರಾದ ಚಂದ್ರಚಾರ್ ಇವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯ ಆಗುಹೋಗುಗಳ ವರದಿಯ ನಂತರ ಕಲಾವಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ 40 ಕಲಾವಿದರಿಗೆ ಕಲಾಭೂಷಣ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.
ಸಮಿತಿಯ ಶ್ರೇಯೋಭಿವೃದ್ಧಿಗೆ ಸದಸ್ಯರುಗಳೊಡನೆ ಚರ್ಚಿಸಿ ಸಲಹೆಗಳನ್ನು ಪಡೆದು ಅನಂತರ ಅಧ್ಯಕ್ಷರಾದ ರವಿಕುಮಾರ್ ಬಿದರೆಯವರು ಮಾತನಾಡಿ ಇನ್ನೂ ಉನ್ನತ ಮಟ್ಟದಲ್ಲಿ ಸಂಘವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸದಸ್ಯರೆಲ್ಲರ ಸಹಕಾರವನ್ನು ಕೋರುತ್ತಾ ತಮ್ಮ ಅಧ್ಯಕ್ಷೀಯ ಭಾಷಣ. ಮಾಡಿದರು.
ಮಧ್ಯಾಹ್ನ ಊಟದ ನಂತರ ರಂಗಗೀತೆಗಳ ಕಾರ್ಯಕ್ರಮವನ್ನು ನಡೆಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷರಾದ ಬಿದರೆ ರವಿಕುಮಾರ್, ಕಾರ್ಯದರ್ಶಿ ವೇದ ಶಿವಕುಮಾರ್, ಖಜಾಂಚಿ ರಮೇಶ ಗೌಡಪ್ಪ, ಗೌರವಾಧ್ಯಕ್ಷರಾದ ಶೇಖರಪ್ಪ, ಉಪಾಧ್ಯಕ್ಷರಾದ ಶ್ರೀಕಂಠಪ್ಪ, ಸೋಮಶೇಖರ, ಕಾರ್ಯಾಧ್ಯಕ್ಷರಾದ ನಾಗಮೋಹನ, ಸಂಘಟನಾ ಕಾರ್ಯದರ್ಶಿ ಪ್ರದೀಪ ಗವೇನಹಳ್ಳಿ, ಕಾನೂನು ಸಲಹೆಗಾರರಾದ ಮಹೇಂದ್ರ ಹಾಗೂ ಸಲಹೆಗಾರರಾದ ರಂಗಸ್ವಾಮಿ ಕೆ ಕೆ, ಟಿ ವಿ, ನಾಗರಾಜ, ನಾಗರಾಜ ಸಿ ಜೆ, ತೇಜೂರು ಸೋಮಣ್ಣ ದ್ಯಾವೇಗೌಡ, ಕೇಶವ ಜಿ ಜಿ. ಮುಂತಾದವರು ಉಪಸ್ಥಿತರಿದ್ದರು. ಸೋಮಶೇಖರ ಸ್ವಾಗತಿಸಿ, ಸಾವಿತ್ರಿ ಗಂಗಾಧರ ಪ್ರಾರ್ಥಿಸಿದರು, ಶಶಿಕಾಂತ ನಿರೂಪಿಸಿ, ನಾಗಮೋಹನ ವಂದಿಸಿದರು.

