ಅಶೋಕ ಚಿಕ್ಕಪರಪ್ಪಾ ಅವರಿಗೆ ಸನ್ಮಾನ

Must Read

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಜೈನ ಲೇಖಕರು, ಸಂಗೀತಗಾರರ ಪುರೋಹಿತರ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು.‌

ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸೇವೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮಾರ್ಗದರ್ಶನದ ಸೇವೆ ಪರಿಗಣಿಸಿ ಹಲಗಾ ಗ್ರಾಮದವರಾದ  ಅಶೋಕ ಚಿಕ್ಕಪರಪ್ಪಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಸಲಾಪುರ ಗ್ರಾಮದಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಡಾ. ಶ್ರೀ ಸಿದ್ಧಸೇನ ಮಹಾರಾಜರು ಈ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಮರಾಠಿಯ ಹೆಸರಾಂತ ನಾಟಕಕಾರ ದತ್ತಾ ಪಾಟೀಲ ಅವರ ‘ತೋ ಏಕ್ ರಾಜಹಂಸ’ ನಾಟಕವನ್ನು ಕನ್ನಡಕ್ಕೆ ಅನುವಾದಿಸಲು ಅಶೋಕ ಅವರಿಗೆ ಬೆಂಗಳೂರಿನ ಬಹುವಚನ ಪ್ರಕಾಶನದಿಂದ ಫೆಲೋಶಿಪ್ ದೊರಕಿತ್ತು. ಆ ನಾಟಕ ಇನ್ನು ಕೆಲವೇ ತಿಂಗಳುಗಳಲ್ಲಿ ಪುಸ್ತಕ ರೂಪ ಪಡೆಯಲಿದ್ದು, ಬಳಿಕ ಅದು ಕನ್ನಡ ರಂಗಭೂಮಿಯಲ್ಲಿ ಅಭಿನಯಿಸಲ್ಪಡಲಿದೆ.‌
ಅಶೋಕ ಅವರ ಮತ್ತೊಂದು ಹೆಗ್ಗಳಿಕೆ ಎಂದರೆ, ದೃಷ್ಟಿ ವಿಕಲಚೇತನರಿಗಾಗಿ ಪುಣೆಯ ‘ನಿವಾಂತ್ ಅಂಧಮುಕ್ತ ವಿಕಾಸಾಲಯ’ ಸಂಸ್ಥೆ ರೂಪಿಸಿರುವ ಮರಾಠಿ – ಹಿಂದಿ ಮುಖಾಂತರ ಕಂಪ್ಯೂಟರ್’ನಲ್ಲಿ ಇಂಗ್ಲಿಷ್ ಕಲಿಸುವ ಸಾಫ್ಟವೇರ್’ನ್ನು ಅವರು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ದೃಷ್ಟಿ ವಿಕಲಚೇತನರಿಗಾಗಿ ಕಂಪ್ಯೂಟರ್ ತರಬೇತಿ ನೀಡುವ ಕರ್ನಾಟಕದ ಎಲ್ಲ ಸಂಸ್ಥೆಗಳು ಈ ಸಾಫ್ಟವೇರ್ ನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.‌

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group