ಮೂಡಲಗಿ – ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ನಡೆದ ಬೂಟ್ ಎಸೆತದ ಕೃತ್ಯವು ನ್ಯಾಯಾಂಗದ ಗೌರವಕ್ಕೂ, ದಲಿತ ಸಮುದಾಯದ ಮಾನಕ್ಕೂ ವಿರುದ್ಧವಾದ ಕ್ರೂರ ಕೃತ್ಯವಾಗಿದೆ. ದಲಿತ ಸಮಾಜದ ಹಕ್ಕು, ಗೌರವ ಮತ್ತು ನ್ಯಾಯದ ಪರವಾಗಿ ಸದಾ ನಿಂತಿರುವ ಭೀಮ್ ಆರ್ಮಿ ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ ಎಂದು ಭೀಮ್ ಆರ್ಮಿಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಮುದುಕಪ್ಪ ವೆಂಕಟಾಪುರ ಹೇಳಿದರು.
ಸೋಮವಾರದಂದು ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಹಶೀಲ್ದಾರರ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರು ದಲಿತ ಸಮುದಾಯದ ಹೆಮ್ಮೆ. ಅವರ ಮೇಲೆ ದಾಳಿ ಮಾಡಿ ಸಮಾಜದ ಶಾಂತಿಯನ್ನು ಹಾಳು ಮಾಡಿದವರನ್ನು ತಕ್ಷಣ ಬಂಧಿಸಿ, ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ನೀಡುವುದು ಅಗತ್ಯವಾಗಿದೆ. ನ್ಯಾಯದ ಗೌರವವನ್ನು ಕಾಪಾಡುವುದು ಮತ್ತು ದಲಿತ ಸಮುದಾಯದ ಭದ್ರತೆಯನ್ನು ಖಾತ್ರಿಪಡಿಸುವುದು ಸರ್ಕಾರದ ಕರ್ತವ್ಯ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿ ಭೀಮ್ ಆರ್ಮಿ ಮೂಡಲಗಿ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ವಿಲ್ಸನ್ ಢವಳೇಶ್ವರ, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಮೆಳ್ಳಿಗೇರಿ, ಮೂಡಲಗಿ ತಾಲೂಕಾ ಅಧ್ಯಕ್ಷ ಸಂತೋಷ್ ಹರಿಜನ, ಸಂತೋಷ್ ಕೆಳಗಡೆ, ನಂಜುಂಡಿ ಸರ್ವಿ, ಮಕ್ತುಮ ಮುಲ್ಲಾ, ಸುನಿಲ್ ಗಸ್ತಿ, ಸಾಗರ ಬಡಕವಗೋಳ, ವಿನೋದ ಚೂಡಪ್ಪಗೋಳ, ಶಾನೂರ ಢವಳೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

