ಬಾಗಲಕೋಟೆ- ಗುರುವಾರ ದಿ. ೧೬ ರಂದು ಗದ್ದನಕೇರಿ ಲಡ್ಡು ಮುತ್ಯಾನ ದೇವಸ್ಥಾನದಲ್ಲಿ ಮುಂಜಾನೆ ೧೦.೩೦ ಕ್ಕೆ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ ಎಂದು ಒಕ್ಕೂಟದ ಮುಖಂಡ ಶಂಕರಪ್ಪ ತಂಬಾಕದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಶರಣಬಸವಶಾಸ್ತ್ರಿಗಳು ವಹಿಸುವರು. ಈ ಸಭೆಯಲ್ಲಿ ಜಿಲ್ಲೆಯ ಕಲಾವಿದರ ವಲಯದಲ್ಲಿರುವ ಹಲವಾರು ಸಮಸ್ಯೆಗಳನ್ನು ಚರ್ಚಿಸಲಾಗುವುದು. ಕಲಾವಿದರು ನೀಡಿದ ಅಹವಾಲಗಳನ್ನು ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗುವುದು. ಜಿಲ್ಲೆಯ ಕಲಾವಿದರು ಸರಿಯಾದ ಸಮಯಕ್ಕೆ ಆಗಮಿಸಿ ತಮ್ಮ ಸಲಹೆ ಮಾರ್ಗದರ್ಶನಗಳನ್ನ ನೀಡಬೇಕು. ಅಲ್ಲದೆ ಕಲಾಕ್ಷೇತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನ ಒಕ್ಕೂಟದಲ್ಲಿ ದಾಖಲಿಸಬೇಕೆಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪವಿತ್ರ ಜಕ್ಕಪ್ಪನವರ. ಚಿನ್ನಪ್ಪ ಗೌಡ ಜಲಗೇರಿ, ಈಶ್ವರಪ್ಪ ಹೊರಟ್ಟಿ ಉಪಸ್ಥಿತರಿದ್ದರು.

