ಮೂಡಲಗಿ – ಕರ್ನಾಟಕ ರಾಜ್ಯದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವ ದಿಸೆಯಲ್ಲಿ ಗ್ರಾಮ ಪಂಚಾಯತಿ,ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಫೆಬ್ರುವರಿ ತಿಂಗಳ ಒಳಗಾಗಿ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಪಕ್ಷದ ಮೂಡಲಗಿ ತಾಲೂಕಾ ಅಧ್ಯಕ್ಷರಾದ ಪ್ರಕಾಶ ಕಾಳಶೆಟ್ಟಿ ಅವರು ಆಗ್ರಹಿಸಿದ್ದಾರೆ.
ಜಿ ಪಂ ಮತ್ತು ತಾ ಪಂ ಕ್ಷೇತ್ರ ಪುನರ್ ವಿಂಗಡನೆಯನ್ನು ಸರ್ಕಾರ ಒಪ್ಪಿದ್ದರು, ಮೀಸಲಾತಿ ಅಂತಿಮಗೊಳಿಸಿ ಇನ್ನು ಚುನಾವಣೆ ಆಯೋಗಕ್ಕೆ ಕೊಟ್ಟಿಲ್ಲ. ಕೋರ್ಟ್ ಪ್ರಕಾರಗಳು ಸೇರಿ ನಾನಾ ಕಾರಣಗಳನ್ನು ನೀಡಿ ಚುನಾವಣೆ ಮುಂದೂಡಿಕೊಂಡು ಬಂದಿರುವ ಸರ್ಕಾರ ಕೂಡಲೇ ಚುನಾವಣೆ ನಡೆಸಬೇಕು.ಬಹುತೇಕ ಐದು ವರ್ಷಗಳ ಒಂದು ಅವಧಿಯನ್ನು ಜನಪ್ರತಿನಿಧಿಗಳೇ ಇಲ್ಲದೆ ಜಿ ಪಂ ಮತ್ತು ತಾ ಪಂಗಳು ಸೊರಗಿವೆ.
2026 ರಲ್ಲಿ ಚುನಾವಣೆ ನಡೆಸದಿದ್ದರೆ ವಿಕೇಂದ್ರೀಕರಣ ವ್ಯವಸ್ಥೆಯನ್ನು ಆಪೋಶನ ಮಾಡಿದ ಅಪಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ. ಚುನಾವಣೆ ನಡೆಸಲು ಸರ್ಕಾರ ಬಯಸಿದರೆ ಕೋರ್ಟ್ ಪ್ರಕರಣ ಇತ್ಯರ್ಥವಾಗಿ ಚುನಾವಣೆ ಹಾದಿ ಸುಸೂತ್ರವಾಗುವುದು ಕಷ್ಟವಲ್ಲ. ಚುನಾವಣೆಯನ್ನು ಮತ್ತಷ್ಟು ಮುಂದೂಡಿಕೊಂಡು ಹೋಗುವುದು ಚುನಾಯಿತ ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.