ಬೀದರ – ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್ ಎಸ್ ಎಸ್ ಅನ್ನು ಪ್ರೀತಿಸುತ್ತಾರೆ ! ಎಂಬ ಸ್ಲೋಗನ್ ಇರುವ ಪೋಸ್ಟರನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರು ಬಿಡುಗಡೆ ಮಾಡಿದರು.
ಬೀದರ್‌ನಲ್ಲಿ ಐ ಲವ್ ಆರ್‌ಎಸ್ಎಸ್ ಎಂಬ ಪೋಸ್ಟರ್ ಕೂಡ ಬಿಡುಗಡೆಯಾಯಿತು.
ನಗರದ ಹನುಮಾನ್ ಮಂದಿರದ ಬಳಿ ಪೋಸ್ಟರ್ ಬಿಡುಗಡೆಯಾಗಿದ್ದು ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನೂ ಹೊರಹಾಕಿದರು
ಆರ್‌ಎಸ್ಎಸ್ ದೇಶದಲ್ಲಿ ಶತಾಬ್ದಿ ಆಚರಿಸುತ್ತಿರುವ ಸಂದರ್ಭದಲ್ಲಿ ಅದನ್ನು ನಿಷೇಧ ಮಾಡಲು ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ ಒಂದು ಸಾರಿ ಆರ್‌ಎಸ್ಎಸ್ ಘನವಸ್ತ್ರ ಧರಿಸಿ ನೋಡು, ಇದರ ತಾಕತ್ ಏನು ಅಂತಾ ಗೊತ್ತಾಗುತ್ತೆ ಎಂದರು.
ಪ್ರಿಯಾಂಕ್ ಖರ್ಗೆಯವರು ಕೂಡಲೇ ಆರ್‌ಎಸ್ಎಸ್ ಸಂಘಕ್ಕೆ ಕ್ಷಮೆಯಾಚಿಸಬೇಕು. ಆರ್‌ಎಸ್‌ಎಸ್ ನಿಷೇಧಕ್ಕಾಗಿ ಬರೆದ ಪತ್ರ ಹಿಂಪಡೆಯಬೇಕೆಂದು ಹಿಂದೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ವರದಿ : ನಂದಕುಮಾರ ಕರಂಜೆ,ಬೀದರ