ಬಾಗಲಕೋಟೆ:- ಜೀವನ ನಿಂತ ನೀರಲ್ಲ ಸದಾ ಹರಿಯುತ್ತಿರುತ್ತದೆ ನಮ್ಮ ದುಡಿಮೆ ಜೊತೆಗೆ ಉಳಿತಾಯವೂ ಬಹಳ ಅವಶ್ಯವಾಗಿದೆ ಎಂದು ಬೆಳಗಾವಿ ಲಿಯಾಪಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಶೀಗಿಹಳ್ಳಿ ಹೇಳಿದರು.
ಕಳೆದ ರವಿವಾರ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘ ಬಾಗಲಕೋಟ ಹಾಗೂ ಬೀಳಗಿ ಸಂಪರ್ಕ ಶಾಖೆಯ ಸಂಘದ ಸವನ ಸದಸ್ಯರ ಸಾಮಾನ್ಯ ಸಭೆ ಹಾಗೂ ಶೈಕ್ಷಣೀಕ ಕಾರ್ಯಗಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಆಪತ್ಕಾಲದಲ್ಲಿ ಉಳಿತಾಯ ನಮ್ಮನ್ನು ಸಂರಕ್ಷಿಸುತ್ತದೆ. ಜೀವವಿಮೆ ನಮ್ಮ ಕುಟುಂಬದ ಸಂರಕ್ಷಣಾ ಕೆಲಸವನ್ನು ನಿರಂತರ ಮಾಡುತ್ತ ಬಂದಿದೆ ಆದ್ದರಿಂದ ಎಲ್ಲರೂ ಜೀವವಿಮೆ ಮಾಡಿಸಿ ತಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು
ಮುಂದುವರೆದು ಲಿಯಾಪಿ ಸಂಘಟಣೆಯು ವಿಭಾಗ ಮಟ್ಟದಲ್ಲಿ ಸಂಘಟಿತ ಹೋರಾಟಗಳ ಮೂಲಕ ಜಿ ಎಸ್ ಟಿ ಗ್ರೂಪ್ , ಇನ್ಸೂರೆನ್ಸ್ ಮೆಡಿಕ್ಲೇಮ ಸೇರಿದಂತೆ ಪ್ರಮುಖ ಬೇಡಿಕೆಗಳು ಕಾಲಕಾಲಕ್ಕೆ ಹೋರಾಟ ಫಲವಾಗಿ ಪ್ರತಿನಿಧಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ಕೊಡುತ್ತಿದೆ ನಮ್ಮೆಲ್ಲರ ಸಮಸ್ಯೆಗಳ ಪರಿಹರಿಸಿಕೊಳ್ಳಲು ಲಿಯಾಪಿ ರಾಷ್ಟçಮಟ್ಟದ ಹಾಗೂ ರಾಜ್ಯಮಟ್ಟದ ಸಂಘಟಣೆಗಳ ಕರೆ ನೀಡಿದಾಗ ಎಲ್ಲರೂ ತಮ್ಮ ತಮ್ಮ ಶಾಖೆಯಲ್ಲಿ ಪ್ರತಿಭಟಿಸಿ ರಾಷ್ಟ್ರ ಮಟ್ಟದ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೇಳಿದ್ದರಲ್ಲಿ ಸಂಘಟಣೆಯಿ೦ದ ಬೇಡಿಕೆಗಳು ಈಡೇರುತ್ತವೆ ಎಂದರು
ಬಾಗಲಕೋಟ ಶಾಖಾಧಿಕಾರಿ ಎಮ್ ಡಿ ರಕ್ಷಿತ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಎಲ್ಐಸಿ ದೇಶದ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತಿದ್ದು ಭಾರತೀಯ ಜೀವವಿಮೆ ನಿಗಮ ಸಾಮಾಜಿಕ ವ್ಯವಸ್ಥೆಗೂ ಅವರ ಕೊಡುಗೆ ನೀಡುತ್ತಿರುವ ಮಹಾ ಸಂಸ್ಥೆಯಾಗಿದೆ. ಮುಂದುವರೆದು ಮನುಷ್ಯನಿಗೆ ಬದುಕಲು ಅನ್ನ ನೀರು ಎಷ್ಟು ಅವಶ್ಯವೋ ಬದುಕಲು ಆರ್ಥಿಕ ಭದ್ರತೆಗಾಗಿ ಆಪತ್ಕಾಲದಲ್ಲಿ ಜೀವವಿಮೆ ಬಹಳ ಅವಶ್ಯವಾಗಿದೆ .
ವಿಮೆಯಿಂದ ಆರ್ಥಿಕ ಅಭದ್ರತೆಯಿಂದ ಪಾರಾಗಬಹುದು ಎಂದರು.
ಶಿರಸಿಯ ನಿವೃತ್ತ ಅಭಿವೃದ್ಧಿ ಅಧಿಕಾರಿ ಆನಂತ ಪದ್ಮನಾಭ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ ಆಧುನಿಕ ಸಮಾಜದಲ್ಲಿ ಖರ್ಚು ವೆಚ್ಚಗಳು ಅತಿಯಾಗಿವೆ ಈ ದೇಶದಲ್ಲಿ ಉಳಿತಾಯ ಎನ್ನುವುದು ಬಹಳ ಕಡಿಮೆಯಾಗಿರುವುದು ಈ ಕಾಲಘಟ್ಟದ ದುರಂತವೆ ಸರಿ ಆದ್ದರಿಂದ ಖರ್ಚನ್ನು ಕಡಿಮೆ ಮಾಡಬೇಕಾದ ಅನಿವಾರ್ಯತೆ ಇದೆ. ಜೀವವಿಮೆ ಪಾಲಿಸಿ ಆಪತ್ಕಾಲದಲ್ಲಿ ರಕ್ಷಿಸುತ್ತದೆ ಎಂಬುವುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದೆ. ಆದ್ದರಿಂದ ಪಾಲಿಸಿ ಮಾಡಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಜೀವವಿಮೆ ಆಪತ್ಕಾಲದ ಬಂಧು ಇದ್ದಂತೆ ಎಂದರು.
ಮುಂದುವರಿದು ಪ್ರತಿನಿಧಿಗಳಿಗೆ ಸಂಸ್ಥೆಯಿ೦ದ ಸಿಗುವ ಸೌಲಭ್ಯಗಳು ಎಲ್ಲಾ ಪಾಲಿಸಿಗಳ ಬಗ್ಗೆ ಸವಿವರವಾಗಿ ಮಾರಾಟ ಮಾಡುವ ವಿಧಾನ ಸೇರಿದಂತೆ ಪ್ರತಿನಿಧಿಗಳಿಗೆ ಹಾಗೂ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಉಪಶಾಖಾಧಿಕಾರಿ ಪಿ.ಆರ್ ಸಿದ್ದೇಶ್ವರ ಮಾತನಾಡಿ ೬೮ ವರ್ಷಗಳ ಹಿಂದೆ ಸ್ಥಾಪನೆಗೊಂಡ ಎಲ್, ಐ.ಸಿ. ತನ್ನ ಪ್ರಗತಿಯಲ್ಲಿ ಹಿನ್ನಡೆ ಸಾಧಿಸಿಲ್ಲ ವರ್ಷ ವರ್ಷಕ್ಕೆ ಹೆಚ್ಚು ಪ್ರಗತಿಯ ಮನ್ನೋಟ ನೀಡುತ್ತವೆ ಹೀಗಾಗಿ ಕೆಲವೆ ದಿನಗಳಲ್ಲಿ ಎಲ್ ಆಯ್ ಸಿ ಜಗತ್ತನಲ್ಲಿಯೇ ಒಂದನೇ ಸ್ಥಾನಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಅಭಿವೃದ್ಧಿ ಅಧಿಕಾರಿ ಎ.ಆರ್ ಜಂಬಗಿ ಮಾತನಾಡಿ ನಾವು ಮಾಡುವ ಕೆಲಸದಲ್ಲಿ ಶ್ರದ್ದೆ ನಿಷ್ಠೆಯಿಂದ ಸಂಸ್ಥೆ ಕೆಲಸ ಮಾಡಿದರೆ ಸಂಸ್ಥೆಯು ಬೆಳೆಯುತ್ತದೆ ಜೊತೆಗೆ ಸಂಘಟನೆಯಿ೦ದ ನಮ್ಮ ಜೀವನದ ಬದಲಾವಣೆ ಹೊಂದುತ್ತದೆ. ತರಬೇತಿಗಳು ಜಾತ್ರೆ ಉತ್ಸವಗಳಾಗಬಾರದು ಎಂದ ಅವರು ಅನಂತ ಪದ್ಮನಾಭನವರ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದ ದಿಕ್ಸೂಚಿಯೆ ಬದಲಾಗುವುದು ಎಂದರು
ಬೆಳಗಾವ ಲಿಯಾಪಿ ಮಾಜಿ ಸದಸ್ಯರು ಹಾಗೂ ಜೆ ಸಿ ಸಿ ಸದಸ್ಯ ಜಿ.ಆಯ್ ಸತರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಘಟನೆ ಪ್ರತಿನಿಧಿಗಳಿಗೆ ಹಾಗೂ ಪಾಲಿಸಿದಾರರಿರಗೆ, ಸಿಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ನಮ್ಮ ಸಂಘಟನೆಯಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು ಲಿಯಾಪಿ, ಸಂಘಟನೆಯ ವಿಭಾಗದ ಖಜಾಂಚಿ ಪಿ.ಆರ್ ದೇಶಪಾಂಡೆ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಎಸ್ ಎಮ್ ಮದರಖಂಡಿ ಬೀಳಗಿ ಶಾಖಾಧಿಕಾರಿ ಬಲರಾಮ ಪಾಡಿ,
ಪ್ರಧಾನ ಕಾರ್ಯದರ್ಶಿ ಬಸವರಾಜ ಎಸ್. ಹೋಟ ವರದಿ ವಾಚನ ಮಾಡಿದರು. ಎಚ್ ವಾಯ್ ಮೊಕಾಶಿ ಸಂಘದ ಲೆಕ್ಕಪತ್ರ ಮಂಡನೆ ಮಾಡಿದರು. ಅತಿಥಿಗಳ ಪರಿಚಯವನ್ನು ರಾಜೇಶ ರಾಯಬಾಗಿ ಮಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷೆ ಎಂ. ಆಯ್ ಹುಲ್ಲಿಕೇರಿ ವಹಿಸಿದರು
ಇದೇ ಸಂದರ್ಭ ದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅಧ್ಯಕ್ಷರು ಅತಿಥಿಗಳು ಮತ್ತು ಉಪನ್ಯಾಸಕರಾದ ಶಿರಸಿಯ ಆನಂತ ಪದ್ಮನಾಭರವರನ್ನು ಸೇರಿದಂತೆ ೨೦೨೪-೨೫ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿನಿಧಿ ಮಕ್ಕಳಿಗೆ ಹಾಗೂ ೨೦೨೪-೨೦೨೫ ನೇಸಾಲಿನ ಹೆಚ್ಚಿನ ವಿಮಾ ವ್ಯವಹಾರ ಮಾಡಿದ ಮತ್ತು ೨೦೨೪ ಎಮ್ ಆರ್ ಟಿ ಹಾಗೂ ಗಾಲಾಕ್ಷಿ ಕ್ಲಬ್ ಪತ್ರಿನಿದಿಗಳಿಗೆ ಮತ್ತು ೨೫ ವರ್ಷ ಪ್ರತಿನಿಧಿತ್ವ ಪೂರೈಸಿದ ಪ್ರತಿನಿದಿಗಳಿಗೆ ಹಾಗೂ ಪತ್ರಿನಿದಿಗಳಾಗಿ ಸೇವೆ ಸಲ್ಲಿಸಿ ಅಭಿವೃದ್ದಿ ಅಧಿಕಾರಿಗಳಾಗಿ ಸೇವೆಸಲ್ಲಿಸುತ್ತಿರುವ ಮಹನೀಯರನ್ನು, ಪತ್ರಕರ್ತ ಜಗದೀಶ ಹದ್ಲಿಯವರನ್ನು ಇದೇ ಸಂಧರ್ಭದಲ್ಲಿ ವೇಧಿಕೆ ಮೇಲಿನ ಗಣ್ಯರು ಸನ್ಮಾನಿಸಿದರು
ಶ್ರೀಮತಿ ಎನ್ ಎಸ್ ಭಟ್ ಹಾಗೂ ಸಂಗಡಿಗರು ನಿಗಮಗೀತೆ ಹಾಗೂ ಲಿಯಾಪಿ ಗೀತೆಯನ್ನು ಹಾಡಿದರು
ಎಂ ವೈ ಹುಲಿಕೇರಿ ಸ್ವಾಗತಿಸಿದರು ಪ್ರತಿನಿಧಿ ಎಸ್ ಬಿ ಹಂಚಿನಾಳ ನಿರೂಪಿಸಿದರು ಪಿ ಆರ್ ದೇಶಪಾಂಡೆ ವಂದಿಸಿದರು