ಹುನಗುಂದ : ಬಾಗಲಕೋಟೆಯ ಬ.ವಿ.ವ ಸಂಘದ ಅಂಗಸಂಸ್ಥೆಯಾದ ತಾಲೂಕಿನ ಕೂಡಲಸಂಗಮದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮುಧೋಳದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಟೇಕ್ ವಾಂಡೋ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಕುಮಾರಿ ಸಂಗೀತಾ ಅಂಗಡಿ, ಜುಡೋ ಸ್ಪರ್ಧೆಯಲ್ಲಿ ಪಲ್ಲವಿ ಕುಂಬಾರ ಹಾಗೂ ಸವಿತಾ ಕೋಟಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಸಾಧನೆಗೈದ ಕ್ರೀಡಾ ಸ್ಪರ್ಧಾಳು ವಿದ್ಯಾರ್ಥಿನಿಯರಿಗೆ ಬ.ವಿ.ವ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ಆಡಳಿತಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ್ ಪದನಿಮಿತ್ತ ಕಾರ್ಯದರ್ಶಿಗಳಾದ ಕೆ.ಎಚ್. ಹೊಸೂರ ಪ್ರಾಚಾರ್ಯರಾದ ಬಸವರಾಜ ಚೌಗಲೆ ಹಾಗೂ ಸಿಬ್ಬಂದಿವರ್ಗದವರು ಅಭಿನಂಧನೆ ಸಲ್ಲಿಸಿದ್ದಾರೆ