ವೃತ್ತಿ ರಂಗಭೂಮಿ ಬೆಳೆಸಿದ್ದು ಉತ್ತರ ಕರ್ನಾಟಕ – ಬಾಲಶೇಖರ ಬಂದಿ

Must Read

ಮೂಡಲಗಿ: ‘ವೃತ್ತಿ ರಂಗಭೂಮಿಯನ್ನು ಮತ್ತು ನಾಟಕ ಕಲಾವಿದರನ್ನು ಉಳಿಸಿ ಬೆಳೆಸಿರುವ ಶ್ರೇಯಸ್ಸು ಉತ್ತರ ಕರ್ನಾಟಕಕ್ಕೆ ಸಲ್ಲುತ್ತದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ಇಲ್ಲಿಯ ಗುರ್ಲಾಪುರ ರಸ್ತೆಯಲ್ಲಿ ತೆಗ್ಗಿಹಳ್ಳಿಯ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದವರ ಹಾಸ್ಯಭರಿತ ‘ಹಸಿರು ಬಳೆ’ ನಾಟಕದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ರಂಗಭೂಮಿ ಸಾಕಷ್ಟು ಸಂಕಷ್ಟದಲ್ಲಿದ್ದರೂ ಸಹ ಉತ್ತರ ಕರ್ನಾಟಕದಲ್ಲಿ ಈಗಲೂ ಅವುಗಳಿಗೆ ಆಶ್ರಯ ನೀಡಿತ್ತಿರುವುದು ಇಲ್ಲಿಯ ಕಲಾಭಿಮಾನಿಗಳ ನಾಟಕ ಪ್ರೀತಿಯಾಗಿದೆ ಎಂದರು.

ಕಂಪನಿ ನಾಟಕಗಳು ಉಳಿಯಬೇಕಾದರೆ ಜನರು ಮೊಬೈಲ್‌ ಬಿಟ್ಟು ಥೇಟರ್‌ಗೆ ಬಂದು ನಾಟಕಗಳನ್ನು ನೋಡಬೇಕು. ಎಲ್ಲಿಯವರೆಗೆ ನಾಟಕ ನೋಡುವ ಪ್ರೇಕ್ಷಕರು ಇರುತ್ತಾರೆ ಅಲ್ಲಿಯವರೆಗೆ ವೃತ್ತಿ ರಂಗಭೂಮಿ ಉಳಿಯುತ್ತದೆ. ರಂಗಭೂಮಿಯನ್ನು ಉಳಿಸಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಬೇಕು ಎಂದರು.

ಶ್ರೇಷ್ಠ ಅನುಭವಿ ಕಲಾವಿದರನ್ನು ಹೊಂದಿರುವ ಸಂತ ಶರೀಫ ಶಿವಯೋಗಿ ನಾಟ್ಯ ಸಂಘವು ‘ಹಸಿರು ಬಳೆ’ ನಾಟಕವು ಹೌಸಫುಲ್ ಓಡುತ್ತಿರುವುದಕ್ಕೆ ಕಲಾವಿದರ ಉತ್ತಮ ಅಭಿನಯವೇ ಮುಖ್ಯ ಕಾರಣವಾಗಿದೆ ಎಂದರು.

ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದರು.

ಅತಿಥಿ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ ಹಲವು ಕಷ್ಟಗಳ ಮಧ್ಯದಲ್ಲಿಯೂ ನಾಟಕಗಳನ್ನು ಪ್ರದರ್ಶನ ಮಾಡುತ್ತಿರುವ ಕಲಾವಿದರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸುವುದು ಅವಶ್ಯವಿದೆ ಎಂದರು.

ಜಾನಪದ ಗಾಯಕ ಶಬ್ಬೀರ ಡಾಂಗೆ ಮಾತನಾಡಿ ನಾಟಕಗಳು ಉಳಿಯಬೇಕಾದರೆ ಜನರ ಪ್ರೋತ್ಸಾಹ ಅವಶ್ಯವಿದೆ ಎಂದರು.

ನಾಟ್ಯ ಸಂಘದ ಮಾಲೀಕರಾದ ಡಾ. ಖತಾಲಸಾಬ ಆರ್. ಬಣಗಾರ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ, ಸಂಚಾಲಕಿ ಆಶಾ ಐ. ಭಾಗವಾನ ಅವರನ್ನು ಸನ್ಮಾನಿಸಿದರು.

ಅನ್ವರ ನದಾಫ, ಈಶ್ವರ ಸತರಡ್ಡಿ, ಪ್ರಕಾಶ ಮಾದರ, ಆನಂದ ಗಿರಡ್ಡಿ, ಮನೋಹರ ಸಣ್ಣಕ್ಕಿ, ಗಂಗಾರಾಮ ಗುಡಗುಡಿ, ಕುಮಾರ ಗಿರಡ್ಡಿ, ಪತ್ರಕರ್ತ ಅಲ್ತಾಫ ಹವಾಲ್ದಾರ್, ಬಸವರಾಜ ಸಸಾಲಟ್ಟಿ, ಗಿರೀಶ ಕರಡಿ, ಅಜ್ಜಪ್ಪ ಅಂಗಡಿ ಅತಿಥಿಯಾಗಿ ವೇದಿಕೆಯಲ್ಲಿದ್ದರು.

 

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group