ಬೀದರ – ದೀಪಾವಳಿ ಒಳಗೆ ರೈತರಿಗೆ ಬೆಳೆ ಪರಿಹಾರದ ಹಣ ಹಾಕುವುದಾಗಿ ಹೇಳಿ ಇನ್ನೂ ಹಾಕಿಲ್ಲ ಗ್ಯಾರಂಟಿಗಳಿಂದಾಗಿ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ರೈತರಿಗೆ ನೀಡಲು ಹಣವಿಲ್ಲ ಎಂದು ಶಾಸಕ ಪ್ರಭು ಚವ್ಹಾಣ ಲೇವಡಿ ಮಾಡಿದರು.
ಬೀದರ ಜಿಲ್ಲೆಯ ಔರಾದನಲ್ಲಿ ಅವರು ಮಾತನಾಡಿ, ಹತ್ತು ದಿನದ ಒಳಗಾಗಿ ರೈತರ ಖಾತೆಗೆ ಹಣ ಹಾಕದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನೆಯ ಮುಂದೆ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಗಳು ಹೆಲಿಕಾಪ್ಟರ್ ಮೂಲಕ ಬೆಳೆ ಹಾನಿ ಸರ್ವೇ ಮಾಡಿದ್ದಾರೆ. ಇದು ನಾಮ ಕೆ ವಾಸ್ತೆ ಸರ್ವೇ ಆಗಿದೆ. ಹೆಲಿಕಾಪ್ಟರ್ ನಲ್ಲಿ ಬಂದರೆ ಹಾನಿಯಾದ ಉದ್ದು, ಹೆಸರು, ಸೊಯಾಬೀನ್ ಬೆಳೆ ಕಾಣುತ್ತಾ ಎಂದು ಸಚಿವ ಚವ್ಹಾಣ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ಈ ಮುಂಚೆ ರೈತರಿಗೆ ಬೆಳೆ ಪರಿಹಾರ ಪಾವತಿಸುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.ಶಾಸಕ ಪ್ರಭು ಚೌಹಾಣ್ ನೇತೃತ್ವದಲ್ಲಿ ಔರಾದ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು
ಬೆಳೆ ಪರಿಹಾರ ನೀಡಿಕೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಔರಾದ್ ಎಪಿಎಂಸಿ ಸರ್ಕಲ್‌ನಿಂದ ಗಾಂಧಿ ಬಸವೇಶ್ವರ ವೃತ್ತದವರೆಗೆ ರ್ಯಾಲಿ. ಹಾಳಾದ ಬೆಳೆ ತಲೆ ಮೇಲೆ ಹೊತ್ತುಕೊಂಡು ರಾಜ್ಯ ಸರಕಾದ ವಿರುದ್ಧ ಚವ್ಹಾಣ ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ವರ್ಷ ಸುರಿದ ಭಾರೀ ಮಳೆಯಿಂದ 1.67 ಲಕ್ಷ ಹೆಕ್ಟೇರ್ ಬೆಳೆ ಹಾನಿ. ಮುನ್ನೂರು ಕೋಟಿ ರೂಪಾಯಿಯಷ್ಟು ಬೆಳೆ ಹಾನಿಯಾಗಿದೆ.ಬೆಳೆ ಹಾನಿ ಪರಿಹಾರ ರೈತರ ಸಾಲ ಮನ್ನಾ ಮಾಡುವಂತೆ ಪ್ರತಿಭಟನೆ. ಔರಾದ್ ತಾಲೂಕಿನ ವಿವಿಧ ಭಾಗದಿಂದ ಆಗಮಿಸಿರುವ ನೂರಾರು ರೈತರು ಭಾಗಿಯಾಗಿದ್ದರು
ವರದಿ : ನಂದಕುಮಾರ ಕರಂಜೆ, ಬೀದರ