ಬೀದರ – ಭಾಲ್ಕಿಯಿಂದ ಬಾರಸಾಂಗಿ ಗ್ರಾಮಕ್ಕೆ ತೆರಳುವ ಬಸ್‌ನಲ್ಲಿ ರೂ. ೧.೬೦ ಲಕ್ಷ ಇದ್ದ ಹಣದ ಬ್ಯಾಗ್ ಬಿಟ್ಟು ಹೋಗಿದ್ದ ಪ್ರಯಾಣಿಕರಿಗೆ ಬ್ಯಾಗನ್ನು ಮರಳಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರದ ದೇವಣಿ ತಾಲೂಕಿನ ಇಂದ್ರಾಳ ಗ್ರಾಮದ ಪ್ರಯಾಣಿಕ ಸೋಪಾನ್‌ರಾವ್ ಬಸ್ ನಲ್ಲಿ ಹಣ ಬಿಟ್ಟು ಹೋಗಿದ್ದ ಪ್ರಯಾಣಿಕ.
ಭಾಲ್ಕಿ ಡಿಪೋದಲ್ಲಿ ಕಾರ್ಯನಿರ್ವಹಿಸುವ ಸಿದ್ರಾಮ ಹಾಗು ಹನೀಪ್ ಹಣ ಮರಳಿಸಿದ ಸಾರಿಗೆ ಸಿಬ್ಬಂದಿ.
ಕಂಡಕ್ಟರ್ ಹಾಗು ಡ್ರೈವರ್ ಹಣ ಮರಳಿಸಿ ಮಾನವೀಯತೆ ಮೆರೆದಿದ್ದು ಚಾಲಕ ಮತ್ತು ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರಿಗೆ ಅಧಿಕಾರಿಗಳು.
ವರದಿ : ನಂದಕುಮಾರ ಕರಂಜೆ, ಬೀದರ