ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆ
ಬೀದರ – ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಯಿತು
ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ಮಾಡುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ವೋಟಿಂಗ್ ಮೂಲಕ ನಿರ್ಣಯ ಮಾಡಿ ಪ್ರೋಸೀಡಿಂಗ್ ಮಾಡಲು ನಿರ್ಧಾರ ಮಾಡಲಾಯಿತು. ಬಳಿಕ ಟಿಪ್ಪು ಸುಲ್ತಾನ್ ಚೌಕ ಸ್ಥಾಪಿಸಿಲು ಒಪ್ಪಿಗೆ ಸೂಚಿಸಿದ 22 ಜನ ಸದಸ್ಯರು, ನಾಲ್ಕು ಸದಸ್ಯರ ಅಪಸ್ವರ ತೆಗೆದರು.
ಕಾನೂನು ರೀತಿಯಲ್ಲಿ ಸರಿ ಇದ್ದರೆ ನಿರ್ಮಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ಕೆಲ ಹಿಂದೂ ಸದಸ್ಯರು. ಈ ವೇಳೆ ಕಾಂಗ್ರೆಸ್ ನಗರಸಭೆ ಸದಸ್ಯರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು
ಎಲ್ಲದಕ್ಕೂ ಕಾನೂನು ಇರಬೇಕಲ್ವಾ, ಟಿಪ್ಪು ಸುಲ್ತಾನ್ ವಿಚಾರದಲ್ಲಿ ಮಾತ್ರ ಏಕೆ ಎಂದು ಕೆಲವರು ವಾದ ಮಂಡಿಸಿದಾಗ ನಗರ ಸಭೆ ಸದಸ್ಯ ರವಿ ಹಾಗೂ ಏಜಾಜ್ ಲಾತುರೆ ನಡುವೆ ಗಲಾಟೆ ಉಂಟಾಯಿತು. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವಂತೆ ತಲುಪಿತು ಕಾಂಗ್ರೆಸ್ ನಗರಸಭೆ ಸದಸ್ಯರ ಕಿತ್ತಾಟ.
ನಂತರ ಉಳಿದ ಸದಸ್ಯರು ಇವರಿಬ್ಬರನ್ನೂ ಸಮಾಧಾನಗೊಳಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ