ಮೂಡಲಗಿ : ಬಸವಾಭಿಮಾನಿಗಳ ವಿರುದ್ಧ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವಮಾನಕರ ಹೇಳಿಕೆ ನೀಡಿದ್ದು ಖಂಡನೀಯವಾಗಿದೆ. ಹಾಗಾಗಿ ಕೂಡಲೇ ಬಸವಪರ ಸ್ವಾಮೀಜಿಗಳಿಗೆ ಕ್ಷಮೆ ಕೇಳಬೇಕು ಎಂದು ಮಲ್ಲು ಗೌಡಿಗೋಡರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರದಂದು ಪಟ್ಟಣದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಸಂಸ್ಕೃತಿ ಅಭಿಯಾನವನ್ನು ಅಪಮಾನಿಸಿದ್ದಾರೆ. ಅಲ್ಲದೇ, ಲಿಂಗಾಯತ ಮಠಾಧೀಶರ ವಿರುದ್ಧ ಅವಾಚ್ಯ, ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಒಬ್ಬ ಸ್ವಾಮೀಜಿಯಾಗಿ ಈ ರೀತಿ ಪದ ಬಳಕೆ ಮಾಡಿರುವುದು ಖಂಡನೀಯ. ಇದು ಲಿಂಗಾಯತ ಧರ್ಮೀಯರಿಗೆ ಹಾಗೂ ಬಸವಣ್ಣನವರ ಅನುಯಾಯಿಗಳಿಗೆ ನೋವುಂಟು ಮಾಡಿದೆ ಎಂದರು.
ದೀಪಕ್ ಜಂಜರವಾಡ ಮಾತನಾಡಿ, ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ಸಮಾಜದಲ್ಲಿ ಶಾಂತಿ ಕದಡಿ ಕಾನೂನು ವ್ಯವಸ್ಥೆಗೆ ಧಕ್ಕೆ ಬರುವ ಸಂಭವವಿದೆ. ಅವರ ಮಠವು ಕೂಡಾ ಬಸವ ತತ್ವಗಳ ಅಡಿಯಲ್ಲಿ ಇದೇ ಅನ್ನೋದನ ಮರೆತು, ಬಾಯಿ ಹರಿಬಿಟ್ಟಿದ್ದಾರೆ. ಅವರ ಬುದ್ಧಿಯಿಂದ ಆ ಮಾತುಗಳು ಬಂದಿಲ್ಲ ಅವರ ಹಿಂದೆ ಇನ್ಯಾರು ಕುತಂತ್ರಿಗಳು ಅವರ ಬಾಯಿಂದ ಈ ಮಾತುಗಳು ಬರುವ ಹಾಗೆ ಮಾಡಿದ್ದಾರೆ. ಅವರು ಕೂಡ ಲಿಂಗಾಯತರಾಗಿದ್ದು ಲಿಂಗಾಯತರ ಸ್ವಾಮೀಜಿಗಳ ವಿರುದ್ಧವೇ ಆ ಕುತಂತ್ರಿಗಳು ಕುತಂತ್ರವನ್ನು ರೂಪಿಸಿದ್ದಾರೆ ಅದನ್ನು ಸ್ವಾಮೀಜಿಗಳು ಅರ್ಥೈಸಿಕೊಂಡಾದರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.