ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು ಶನಿವಾರ ಮತ್ತು ಭಾನುವಾರ ಮತ್ತು ಆಯೋಜಿಸಲಾಗಿತ್ತು.
ಪ್ರಪ್ರಥಮ ಬಾರಿಗೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಹಾಸನಾಂಬ ಚಲನಚಿತ್ರೋತ್ಸವ 2025 ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈ ಚಲನಚಿತ್ರೋತ್ಸವದಲ್ಲಿ ಸುಮಾರು 10 ಕಿರುಚಿತ್ರಗಳು ಹಾಗೂ 2 ವಿಶೇಷ ಕಿರು ಚಿತ್ರಗಳು ಮತ್ತು 3 ಕನ್ನಡ ಚಲನಚಿತ್ರಗಳು ಪ್ರದರ್ಶನ ಗೊಂಡಿವೆ.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ್ ತಗಡೂರು, ಹಾಸನ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಶ್ರೀಮತಿ ಹೇಮಲತಾ ಕಮಲ್ ಕುಮಾರ್, ನಗರಸಭೆ ಮಾಜಿ ಸದಸ್ಯರಾದ ಶ್ರೀಯುತ ಕಮಲ್ ಕುಮಾರ್ ಈ ಕಾರ್ಯಕ್ರಮದ ಮಾಧ್ಯಮ ಪಾಲುದಾರರದ (ಮೀಡಿಯಾ ಪಾರ್ಟ್ನರ್) ನಮ್ಮ ಹಾಸನ ಟಿವಿಯ ಪ್ರಧಾನ ಸಂಪಾದಕರಾದ ತೌಫಿಕ್ ಅಹಮ್ಮದ್ ಮತ್ತು ಕಾರ್ಯಕ್ರಮದ ಆಯೋಜಕರಾದ ಗುರು ಪ್ರಸಾದ್ ಪಾಲ್ಗೊಂಡಿದ್ದರು
ಆಯ್ಕೆಯಾದ ಉತ್ತಮ ಕಿರು ಚಿತ್ರಗಳಿಗೆ ವಿವಿಧ ವಿಭಾಗಳಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗುರು ಪ್ರಸಾದ್, ಸ್ಟಾನಿ ಜೋಯ್ಸನ್, ಶಕೀಲ್ ಅಹಮ್ಮದ್, ಪ್ರಶಾಂತ್ ಹಾಸನ್, ಪರಮೇಶ್ ದೊಡ್ಡಮಗ್ಗೆ ದೇವರಾಜ್ ರಾಯಚೂರು, ಜೀವನ್ ರತ್ನ
ವಿನಾಯಕ್ ಬಿದಾರ್, ನಾಗರಾಜ್ ಭಂಡಾರಿ
ಈ ಕಾರ್ಯಕ್ರಮದ ಆಯೋಜಕರಾಗಿ ಈ ಕಾರ್ಯಕ್ರಮವನ್ನು ಹಾಸನದ ನಿರೂಪಕರಾದ ಕಾರ್ತಿಕ್, ರಕ್ಷಿತ ಕಾರ್ತಿಕ್ ಮತ್ತು ಕುಮಾರಿ ಮಿಲನ ಗೌಡ ಅತ್ಯುತ್ತಮವಾಗಿ ನಡೆಸಿಕೊಟ್ಟರು.