ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವರಶೀಗಿಹಳ್ಳಿ
ದೇವರಶೀಗಿಹಳ್ಳಿ: ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುವ ನಿಟ್ಟಿನಲ್ಲಿ ಕೇಬಲ್ ಸರ್ವಿಸ್ ಗ್ರೂಪ್ (CSG), ಬೆಂಗಳೂರು ವತಿಯಿಂದ ₹94,200 ಮೌಲ್ಯದ 100 ನಲಿ-ಕಲಿ ಕುರ್ಚಿಗಳು ಮತ್ತು 12 ಟೇಬಲ್‌ಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಶೀಗಿಹಳ್ಳಿಗೆ ದೇಣಿಗೆಯಾಗಿ ನೀಡಲಾಯಿತು.
ಈ ದೇಣಿಗೆಯನ್ನು CSG ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾ ಶೃಂಗೇರಿ ಬೆಳಗಾವಿ ಅವರು ಶಾಲಾ ಮಕ್ಕಳ ಕಲಿಕೆಯ ವಾತಾವರಣ ಸುಧಾರಿಸುವ ಉದ್ದೇಶದಿಂದ ಹಸ್ತಾಂತರಿಸಿದರು. ಸಂಸ್ಥೆಯ ಪರವಾಗಿ ಬಂದಿದ್ದ ತೃಪ್ತಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಣಿಗೆ ಸಮಾರಂಭದಲ್ಲಿ ಶಾಲಾ ಗುರುಬಳಗ, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮ ಪಂಚಾಯತ್ ದೇವರಶೀಗಿಹಳ್ಳಿ ಇವರ ವತಿಯಿಂದ ಸುಮಾ ಶೃಂಗೇರಿ ಹಾಗೂ ತೃಪ್ತಿ ಮೇಡಂ ಅವರಿಗೆ ಸತ್ಕಾರ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಈರಣ್ಣ ತೋಟಗಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಶಂಕರಯ್ಯ ಶಹಪುರಮಠ, ಸಂಪನ್ಮೂಲ ವ್ಯಕ್ತಿ ವಿನೋದ ಪಾಟೀಲ, ಗ್ರಾಮ ಹಿರಿಯರು ಮತ್ತು ಶಾಲಾ ಗುರುಬಳಗ ಹಾಜರಿದ್ದರು. ಸುಮಾ ಶೃಂಗೇರಿ ಹಾಗೂ ತೃಪ್ತಿ ಮೇಡಂ ಅವರಿಗೆ ಸತ್ಕಾರ ಸಲ್ಲಿಸಲಾಯಿತು.