ಕಿತ್ತೂರು ಉತ್ಸವದ ಗೌರವಾರ್ಥ ಪೂಜಾ ಕಾರ್ಯಕ್ರಮ

Must Read

ಮೂಡಲಗಿ:- ಕಿತ್ತೂರು ಉತ್ಸವದ ವಿಜಯೋತ್ಸವದ ನೆನಪಿಗಾಗಿ ಮೂಡಲಗಿ ತಹಶೀಲ್ದಾರ ಕಛೇರಿಯಲ್ಲಿ ತಾಲೂಕಾಡಳಿತದ ವತಿಯಿಂದ ಚೆನ್ನಮ್ಮನ ಭಾವಚಿತ್ರಕ್ಕೆ ಗೌರವಾರ್ಥ ಪೂಜೆ ಸಲ್ಲಿಸಿದರು.

ಚೆನ್ನಮ್ಮಾಜಿ ಎರಡು ನೂರುವರ್ಷ ಹಿಂದೆ ಬ್ರಿಟಿಷರ ವಿರುದ್ದ ಹೋರಾಟ ಮಾಡಿ ಗೆದ್ದ ನೆನಪಿಗಾಗಿ ಪ್ರತಿ ವರ್ಷ ಕರ್ನಾಟಕ ಸರ್ಕಾರ ಅಕ್ಟೋಬರ್, ೨೩ ರಂದು ಮೂರು ದಿನಗಳು ಕಿತ್ತೂರಿನಲ್ಲಿ ಉತ್ಸವ ಆಚರಿಸುತ್ತಾ ಬಂದಿರುತ್ತದೆ. ಸಮಾಜಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವವರನ್ನು ಜಾತಿಯಿಂದ ನೋಡುತ್ತಿರುವುದು ವಿಪರ್ಯಾಸ. ಶಿಕ್ಷಣ ಹೆಚ್ಚುತ್ತಿದ್ದರು ಸಹ ಸಮಾಜ ಸುಧಾರಕರನ್ನು ಜಾತಿಯಿಂದ ನೋಡುವುದು ತಪ್ಪುತ್ತಿಲ್ಲವೆಂದು ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕ ಅನಿಲಕುಮಾರ ಭಂಡಾರಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದು ಸಂತೋಷವಾಗಿದೆ ಎಂದರು.

ನಾಡಿನ ಜನತೆಗೆ ಬ್ರಿಟಿಷರ ಬಗ್ಗೆ ತಿಳಿದಿರುವುದೆ. ನಾವೆಲ್ಲರೂ ಇಂದು ಚೆನ್ನಮ್ಮಳ ಹೋರಾಟದಿಂದ ಬ್ರಿಟಿಷರ ವಿರುದ್ದ ಜಯಗಳಿಸಿದ ದಿನವನ್ನು ವಿಜಯದ ದಿನ ಅಂತ ಹೆಮ್ಮೆಯಿಂದ ಹೇಳುತ್ತೇವೆ.ಅದಕ್ಕಾಗಿ ನಾವೆಲ್ಲರೂ ಕೂಡಿಕೊಂಡು ತಾಯಿ ಚೆನ್ನಮ್ಮಳ ಭಾವಚಿತ್ರಕ್ಕೆ ಗೌರವಾರ್ಥವಾಗಿ ಪುಷ್ಪಾರ್ಚನೆ ಮಾಡಿದೆವು ಎಂದು ಕಾರ್ಯಕ್ರಮದ ಅಧ್ಯಕ್ಷವಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಪಿ.ಹಿರೇಮಠ ಸಂತೋಷ ವ್ಯಕ್ತಪಡಿಸಿದರು.

೨ ಗ್ರೇಡ್ ಶಿವಾನಂದ ಬಬಲಿ, ಹೆಸ್ಕಾಂ ಅಧಿಕಾರಿ ಎಮ್.ನಾಗನ್ನವರ,ತಾಲೂಕಾ ಪಂಚಾಯತ ಅಧಿಕಾರಿ ಸಂಗಮೇಶ ರೊಡ್ಡನವರ, ವೈದ್ಯಾಧಿಕಾರಿ ಭಾರತಿ ಕೋಣಿ, ಉಪ ಖಜಾನೆ ಸಹಾಯಕ ಅಧಿಕಾರಿಣಿ ಸುಜಾತ ಜಾಧವ, ಸಿಡಿಪಿಒ ಕಛೇರಿಯ ಮೇಲ್ವಿಚಾರಕಿ ರೇಣುಕಾ ಅರಭಾವಿ, ಪಂಚಮಸಾಲಿ ಮುಖಂಡ ಬಸಗೌಡ ಪಾಟೀಲ,ಕೇದಾರಿ ಬಷ್ಮೆ, ಈರಪ್ಪ ಢವಳೇಶ್ವರ, ಕಲ್ಮೇಶ ಬಳಿಗಾರ,ಆರಕ್ಷಕರು ಮತ್ತು ಇನ್ನು ಅನೇಕ ತಾಲೂಕಾಡಳಿ ಸಿಬ್ಬಂದಿಗಳು, ಊರಿನ ಪ್ರಮುಖರು ಚೆನ್ನಮ್ಮಳ ವಿಜಯೋತ್ಸವದ ಸಂಭ್ರಮದ ನೆನಪಿಗಾಗಿ ಮೂಡಲಗಿ ತಹಶಿಲ್ದಾರ ಕಛೇರಿಯಲ್ಲಿ ಚೆನ್ನಮ್ಮಳ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪರಶುರಾಮ ನಾಯಿಕ ಕಾರ್ಯಕ್ರಮ ನಿರೂಪಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group