ಹೆಚ್. ಎಸ್. ಪ್ರತಿಮಾ ಹಾಸನ್ ಗೆ ‘ಕೆಂಪಮ್ಮ ಪ್ರಶಸ್ತಿ’ ಪ್ರದಾನ

Must Read

ಅ:26ರಂದು ಅಕ್ಕಮಹಾದೇವಿ ಸಭಾಂಗಣ. ಕನ್ನಡ ಸಾಹಿತ್ಯ ಪರಿಷತ್. ಬೆಂಗಳೂರು ಜಾಗೃತಿ ಟ್ರಸ್ಟ್ ವತಿಯಿಂದ ಹಾಗೂ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ”ಯ ಸಹಯೋಗದಲ್ಲಿ ನಡೆಯುತ್ತಿರುವ “ನಗೆ ಹಬ್ಬ” ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯಾದ ಹಾಸನ ನಗರದ ಶಿಕ್ಷಕಿ, ಸಾಮಾಜಿಕ ಚಿಂತಕಿ, ಸಾಹಿತಿ, ಪತ್ರಕರ್ತರು ಹಾಗೂ ‘ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ’ ಸಂಸ್ಥಾಪಕ ಅಧ್ಯಕ್ಷೆ ಎಚ್ ಎಸ್ ಪ್ರತಿಮಾ ಅವರಿಗೆ ಕೆಂಪಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತಿಮಾ ಅವರು  ಬಹುಮುಖ ಪ್ರತಿಭೆ, ಸದಾ ಕ್ರಿಯಾಶೀಲರಾಗಿರುವ ಹಾಗೂ ಜಿಲ್ಲೆ, ರಾಜ್ಯ,ಮಟ್ಟದಲ್ಲಿ ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯನಿರ್ವಹಿಸುತ್ತಿರುವ, ನೂರಾರು ಪ್ರಶಸ್ತಿಗಳನ್ನು ಪಡೆದಿರುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದು ಗುರುತಿಸಿಕೊಂಡಿರುವ ಮಹಿಳಾ ಸಾಧಕಿ, ಮಹಿಳಾ ಹೋರಾಟಗಾರ್ತಿ, ಕನ್ನಡ ಪರ ಹೋರಾಟಗಾರ್ತಿ,ಸಮಾಜ ಸೇವಕಿ, ಸಂಘಟಕಿ, ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತಿಕವಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ಹಲವಾರು ಪ್ರಕಾರಗಳಲ್ಲಿ 12 ಕ್ಕೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಹಲವು ಕೃತಿ ಬಿಡುಗಡೆಗೆ ಸಿದ್ಧವಾಗುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಹಾಗೂ ಅಂಕಣಗಾರ್ತಿಯಾಗಿ, ಹಲವಾರು ಪ್ರಕಾರಗಳಲ್ಲಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಖ್ಯಾತ ಹಾಸ್ಯ ಬರಹಗಾರ ಎಂ. ಎಸ್. ನರಸಿಂಹಮೂರ್ತಿರವರ “ಬಂಟಿ ಹೇಳಿದ ಕತೆಗಳು” (ಮಕ್ಕಳ ಇವತ್ತು ಹಾಸ್ಯಮಯ ಕತೆಗಳು)ಕೃತಿ ಬಿಡುಗಡೆ ಹಾಗೂ ಅವರ 76 ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅಧ್ಯಕ್ಷರು ನಾಗೇಶ್,  ವೈ. ವಿ. ಗುಂಡೂರಾವ್,  ಹೆಚ್ ಡುಂಡಿರಾಜ್, ಅಪ್ಪಣ್ಣ ಮೇಟಿಗೌಡ, ಹೆಚ್. ಎಂ. ರಘುಕೋಟೆ. ಇನ್ನೂ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ರಾಮಾಯಣ ಮಹಾಭಾರತಕ್ಕಿಂತ ಹಳೆಯ ಭಾಷೆ ಕನ್ನಡ – ಬಾಗೇಶ ಮುರಡಿ

ಸಿಂದಗಿ; ಪ್ರಪಂಚದಲ್ಲಿ ೬ ಸಾವಿರ ಭಾಷೆಗಳಿಗೆ ಅದರಲ್ಲಿ ೪ ಸಾವಿರ ಭಾಷೆಗಳಿಗೆ ಲಿಪಿಯಿಲ್ಲ. ಲಿಪಿ ಇರುವ ೨ ಸಾವಿರ ಭಾಷೆಗಳಲ್ಲಿ ಇತಿಹಾಸವನ್ನು ಹೊಂದಿದ ಹಾಗೂ ಮಹಾಭಾರತ,...

More Articles Like This

error: Content is protected !!
Join WhatsApp Group