ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗರಿ

Must Read

ಬಾಲ್ಯದಿಂದಲೆ ಜನಪದವನ್ನು ತಮ್ಮ ಉಸಿರಾಗಿಸಿಕೊಂಡು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರಂಪರೆಯ ಉಳಿವಿಗೆ ಸುಮಾರು 40 ವಷ೯ಕ್ಕೂ ಹೆಚ್ಚು ಕಾಲ ಜನಪದ ಸಂಗೀತ ಸೇವೆ ಮಾಡಿದ ಹಿರಿಯ ಜನಪದ-ಜನಪರ ಸೇವಕಿ ಮುಧೋಳ ತಾಲೂಕಿನ ಮುಗಳಖೋಡದ ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರ ಅವರಿಗೆ ಬಾಗಲಕೋಟೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” 2025 ರ ಗರಿ ಇವರ ಮುಡಿಗೇರಿದೆ.

ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಾವ೯ಜನಿಕ ವಲಯದಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ. 2015 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಗೋವಿಂದ ಎಂ ಕಾರಜೋಳ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಅವರಿಂದ ರಾಜ್ಯ ಮಟ್ಟದ ಜನಪದ ಭೂಷಣ ಪ್ರಶಸ್ತಿ ಪಡೆದು ಪ್ರಶಂಸೆಗೆ ಪಾತ್ರರಾದವರು.

2016ದಲ್ಲಿ ಇಂಚಲದ ಸಾಧು ಚಕ್ರವರ್ತಿ, ಜಗದ್ಗುರು ಶಿವಾನಂದ ಭಾರತಿ ಶ್ರೀಗಳಿಂದ “ಗುರು ಸೇವಾ ರತ್ನ” ಪ್ರಶಸ್ತಿ ಪಡೆದವರು. 2017 ದಿಲ್ಲಿ ಮುಧೋಳ ತಾಲೂಕಾಡಳಿತ ಗೌರವಿಸಿದೆ ಹಿಂದಿನ ಸಚಿವೆ ಉಮಾಶ್ರೀ, ಶಾಸಕ ಸಿದ್ದು ಸವದಿ ಸೇರಿದಂತೆ ಅನೇಕ ಗಣ್ಯರ ಮುಂದೆ ಸಂಗೀತ ಸೇವೆ ಸಲ್ಲಿಸಿದ್ದಾರೆ.

1]ನಿತ್ಯ ತತ್ವ ಚಿಂತನ ಭಕ್ತಿ ಬೆಳಗು ಕಾರ್ಯಕ್ರಮ .2]ಪ್ರತಿ ರವಿವಾರದ ಸತ್ಸಂಗ ಕಾರ್ಯಕ್ರಮ. 3]ತತ್ವದರ್ಶನ ಮನೆಯಂಗಳದಲ್ಲಿ ಶರಣರ ಮನದ ಮಾತು ಮಾಸಿಕ ಕಾರ್ಯಕ್ರಮ. 4]ಕನಕ ಪುರಂದರ ಬಸವಾದಿ ಶರಣರ ಚಿಂತನ ತ್ರೈಮಾಸಿಕ ಕಾರ್ಯಕ್ರಮ.5 ] ಶಿವಶರಣರ ಜಯಂತಿ -ತತ್ವಪ್ರಚಾರ ಇವರ ನಿತ್ಯ ಕಾಯಕ ಇದರೊಂದಿಗೆ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ,  ಧಾರವಾಡ ಸೇರಿದಂತೆ ಅನೇಕ ಭಾಗಗಳಲ್ಲಿ ಜನಪದ ತತ್ವಪದಗಳನ್ನ ಹಾಡಿ ಜನಮನ ಗೆದ್ದಿದ್ದಾರೆ .ಇವರ ಸಾರ್ಥಕ ಸೇವೆಗೆ 2025 ನವಂಬರ 1ರಂದು ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇವರನ್ನ ಗೌರವ ಪೂರಕವಾಗಿ ಸತ್ಕರಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಿದ್ದಾರೆ.

ಅಭಿನಂದನೆಗಳು – ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಕಲಾವಿದೆ ಶ್ರೀಮತಿ ಶಾಮಲಾ ಲಕ್ಷ್ಮೇಶ್ವರವರನ್ನು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ, ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ, ಶ್ರೀಮನ್ ನಿಜಗುಣ ಶಿವಯೋಗಿ ಪ್ರತಿಷ್ಠಾನ, ಬಸವ ಜಾನಪದ ಕಲಾಬಳಗ ಸೇರಿದಂತೆ ಅನೇಕ ಕಲಾವಿದರ ಬಳಗ ಅಭಿನಂದನೆಯನ್ನು ಸಲ್ಲಿಸಿವೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group