ಬೀದರ – ಸುದ್ದಿ ಮಾಡಲು ತೆರಳಿದ್ದ ಗದಗ ಜಿಲ್ಲೆಯ ನ್ಯೂಸ್‌ಫಸ್ಟ್ ಜಿಲ್ಲಾ ವರದಿಗಾರರ ಮೇಲೆ ಬಿಜೆಪಿ ಎಮ್‌ಎಲ್‌ಸಿ ಎಸ್‌ವಿ ಸಂಕನೂರು ಹಾಗು ಬೆಂಬಲಿಗರು ನಡೆಸಿದ ಹಲ್ಲೆ ಖಂಡಿಸಿ ಬೀದರ್ ಜಿಲ್ಲಾ ದೃಶ್ಯ ಮಾಧ್ಯಮ ಸಂಘ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವ ಜಿ.ಪರಮೇಶ್ವರಗೆ ಮನವಿ ಸಲ್ಲಿಸಿದರಯ.
ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಸೇರ್ಪಡೆ ವಿಚಾರವಾಗಿ ಎಮ್‌ಎಲ್‌ಸಿ ಎಸ್‌ವಿ ಸಂಕನೂರ ಕಚೇರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ನ್ಯೂಸ್‌ಫಸ್ಟ್ ಫಸ್ಟ್ ವರದಿಗಾರ ಸುದ್ದಿ ಮಾಡಲು ಪರಿಷತ್ ಸದಸ್ಯರ ಕಚೇರಿಗೆ ತೆರಳಿದ್ದರು. ಆ ವೇಳೆ ಬಿಜೆಪಿ ಎಮ್‌ಎಲ್‌ಸಿ ಸಂಕನೂರ ಹಾಗು ಅವರ ಬೆಂಬಲಿಗರು ವರದಿಗಾರರಿಗೆ ಅವಾಚ್ಯ ಪದದಿಂದ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಹಲ್ಲೆ ಮಾಡಿದ ಎಸ್‌ವಿ ಸಂಕನೂರ ಹಾಗು ಅವರ ಬೆಂಬಲಿಗರ ವಿರುದ್ದ ಕಾನೂನು ಕ್ರಮ ಕೈಗೊಂಡು ನಿರ್ಭೀತಿಯಿಂದ ವರದಿ ಮಾಡುವ ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಬೀದರ್ ಜಿಲ್ಲಾ ದೃಶ್ಯ ಮಾಧ್ಯಮ ಸಂಘ ಮನವಿ ಸಲ್ಲಿಸಿತು.

