ಮುಧೋಳ – ಮಾನವ ಜನ್ಮ ಅಪರೂಪದ ಜನ್ಮ. ಇದು ದೇವರು ಕೊಟ್ಟ ಕಾಣಿಕೆ .ಈ ಜನ್ಮದ ಸಾರ್ಥಕತೆಯಾಗಬೇಕಾದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಭಿಪ್ರಾಯ ಪಟ್ಟರು.
ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಿ ಮಾತನಾಡುತ್ತಾ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮುಧೋಳ ತಾಲೂಕಿನ ಮುಗಳಖೋಡದ ಜನಪದ ಸಂಗೀತ ಗಾಯಕಿ ಶ್ರೀಮತಿ ಶಾಮಲಾ ಲಕ್ಷ್ಮೇಶ್ವರ ಅವರಿಗೆ 2025ರ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿ ಮಾತನಾಡುತ್ತಾ ಪ್ರತಿಯೊಬ್ಬ ಮನುಷ್ಯನು ಏನನ್ನಾದರೂ ಸಾಧಿಸಬೇಕು. ಬದುಕು ಸಮಾಜಕ್ಕೆ ಆದರ್ಶವಾಗಿರಬೇಕು. ಸಮಾಜಮುಖಿ ಜೀವನದಲ್ಲಿ ಸಂತೃಪ್ತಿಯನ್ನು ಕಾಣಬೇಕೆಂದು ಹೇಳಿದರು.
ಸಂಸದ.ಪಿ.ಸಿ ಗದ್ದಿಗೌಡರ .ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್ ಪೂಜಾರ, ನಾರಾಯಣ ಸಾ.ಭಾಂಡಗೆ, ಜಿಲ್ಲಾಧಿಕಾರಿ ಸಂಗಪ್ಪ, ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಗಣ್ಯಮಾನ್ಯರು ಉಪಸ್ಥಿತರಿದ್ದರು
ಸಾಂಸ್ಕೃತಿಕ ಸಂಸ್ಥೆಗಳಿಂದ ಗೌರವ— ರವಿವಾರ ದಿನಾಂಕ 9 ರಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಆವರಣದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜನಪದ ಸೇವಕಿ ಶ್ರೀಮತಿ ಶಾಮಲಾ ಲಕ್ಷ್ಮೇಶ್ವರ ಅವರನ್ನು ಅಪ್ಪಾಜಿ ಸಾಂಸ್ಕೃತಿಕ ಸಂಸ್ಥೆ, ಬಸವ ಜಾನಪದ ಕಲಾ ಸಂಸ್ಥೆ, ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ, ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆ, ಗಾನಯೋಗಿ ಶ್ರೀ ಗುರು ಪಂಚಾಕ್ಷರಿ ತಾಲೂಕಾ ಕಲಾವಿದರ ಸಂಘ ಸೇರಿದಂತೆ ವಿವಿಧ ಕಲಾ ಬಳಗವು ಗೌರವಿಸಲಿವೆ .
ಇದೇ ಸಂದರ್ಭದಲ್ಲಿ ದಾಸ ಶ್ರೇಷ್ಠ ಸಂತ ಭಕ್ತ ಕನಕದಾಸರ 538ನೆಯ ಜಯಂತ್ಯುತ್ಸವ ಹಾಗೂ 121ನೆಯ ರವಿವಾರದ ಸತ್ಸಂಗ ಕಾರ್ಯಕ್ರಮವು ಜರುಗಲಿದೆ ಎಂದು ಸಂಘಟಕ ಗ್ರಾಮ ಪಂಚಾಯಿತಿ ಸದಸ್ಯ ಶಂಕರ ಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

