ಕನಕದಾಸರ ಕಾವ್ಯ ಕೃತಿಗಳ ಆಶಯಗಳನ್ನು ಅರಿತುಕೊಳ್ಳಿ : ಪ್ರಾಚಾರ್ಯ ಜಗದೀಶ ಭೈರಮಟ್ಟಿ

Must Read

ಬಾಗಲಕೋಟೆ: ಕನಕದಾಸರು ಹಾಗೂ ಪುರಂದರ ದಾಸರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ; ಕನಕದಾಸರ ಕೃತಿಗಳು ಒಳಗೊಂಡ ವಿಷಯವಸ್ತುಗಳು ಇಂದಿಗೂ ಆದರ್ಶಪ್ರಾಯ ಎನಿಸಿವೆ. ಕನಕದಾಸರ ಬದುಕಿನಲ್ಲಿನ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಪ್ರಾಚಾರ್ಯ ಡಾ. ಜಗದೀಶ ಗು. ಭೈರಮಟ್ಟಿ ಹೇಳಿದರು.

ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಹಾಗೂ ಸಾಂಸ್ಕೃತಿಕ ವೇದಿಕೆಗಳ ವತಿಯಿಂದ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಮಧಾನ್ಯ ಚರಿತೆ, ಮೋಹನತರಂಗಿಣಿ, ನಳಚರಿತೆ,ಹರಿಭಕ್ತಿಸಾರ ಕಾವ್ಯ ಕೃತಿಗಳ ಆಶಯಗಳನ್ನು ಅಧ್ಯಯನದ ಮೂಲಕ ಅರಿತು ಜೀವನದ ಸಾರ್ಥಕತೆಯನ್ನು ಕಾಣಬೆಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಂಘದ ಮುಖ್ಯಸ್ಥ ಡಾ. ಸಂಗಮೇಶ ಹಂಚಿನಾಳ ಮಾತನಾಡಿ ಸಾಹಿತ್ಯ,ಸಂಗೀತ ಕ್ಷೇತ್ರಗಳಿಗೆ ಕನಕದಾಸರ ಕೊಡುಗೆಗಳು ಅನನ್ಯ ಎನಿಸಿವೆ.ಹರಿಭಕ್ತರಾಗಿ ಅವರು ಧಾರ್ಮಿಕ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆಮಾಡಿದ್ದು ಸ್ಮರಣೀಯ ಎನಿಸಿದೆ ಎಂದು ಹೇಳಿದರು.

ಭಕ್ತ ಕನಕದಾಸರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಸಿಬ್ಬಂದಿವರ್ಗ ಪೂಜೆ ನೆರವೇರಿಸಿ ಪುಷ್ಪನಮನ ಸಲ್ಲಿಸಿದರು. ವಿಶ್ರಾಂತ ಪ್ರಾಚಾರ್ಯ ಬಿ.ಬಿ. ಬೇವೂರ. ಮಹಿಳಾ ಸಬಲೀಕರಣ ಘಟಕದ ಮುಖ್ಯಸ್ಥ ಎಸ್.ಎಸ್ ಆದಾಪೂರ, ಸ್ಕೌಟ್ಸ ಮತ್ತು ಗೈಡ್ಸ್ ವಿಭಾಗದ ಮುಖ್ಯಸ್ಥ ಡಿ.ವಾಯ್. ಬುಡ್ಡಿಯವರ, ಬೋಧಕೇತರ ಸಿಬ್ಬಂದಿ ಶಿವು ಕಟಗಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ವೇದಿಕೆ, ಐ.ಕ್ಯೂ.ಎ.ಸಿ ಘಟಕಗಳ ಮುಖ್ಯಸ್ಥ ಡಾ. ಎ.ಎಮ್. ಗೊರಚಿಕ್ಕನವರ ಸ್ವಾಗತಿಸಿ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಕಟದ ಕಾರ್ಯಕ್ರಮಾಧಿಕಾರಿ ಜಿ.ಎಸ್ ಗೌಡರ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group