ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ದಾಸಶ್ರೇಷ್ಠ, ಮಹಾನ್ ದಾರ್ಶನಿಕ,ಕೀರ್ತನಕಾರ ಕನಕದಾಸರ ಜಯಂತಿಯನ್ನು ನವಂಬರ್ 8 ರಂದು ಆಚರಿಸಲಾಯಿತು.
ಉಪನಿರ್ದೇಶಕರಾದ ರಾಮಯ್ಯ ಅವರು ದೀಪ ಬೆಳಗಿಸಿ ಗೌರವ ಸಲ್ಲಿಸಿ ಮಾತನಾಡಿ,ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ,ಪಾಂಡಿತ್ಯಪೂರ್ಣ ಕವಿ ಕನಕದಾಸರು. ಅತ್ಯಂತ ಸಹಜ ಬದುಕಿನಿಂದ ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರು ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನಕದಾಸರ ಜೀವನ ದರ್ಶನ, ಸಾಹಿತ್ಯ, ಮತ್ತು ಕೀರ್ತನೆಗಳ ಕುರಿತ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿಬ್ಬಂದಿಗಳಾದ ಎ ಎ ಕಾಂಬಳೆ, ಪ್ರಕಾಶ ಇಚಲಕರಂಜಿ, ಆನಂದ ಮುತ್ತಗಿ, ಸುನಿಲ್ ಕುಮಾರ್, ರಾಜು ಕಟ್ಟಿಮನಿ ಮತ್ತು ಓದುಗರು ಹಾಜರಿದ್ದರು.

