ಬೆಂಗಳೂರಿನ ಲೇಖಿಕಾ ಸಾಹಿತ್ಯಕ್ಕೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇವರ್ಷದ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಹಿತ್ಯ ಕ್ಷೇತ್ರದ ಸಾಧಕ ಲೇಖಕ ಲೇಖಕಿಯರಿಗೆ ದಿನಾಂಕ 9- 11-2025ರ ಭಾನುವಾರ ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಲೇಖಿಕಾ ಶ್ರಿ 2025 ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹಾಸನದ ಸಾಹಿತಿ ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಉದಯರವಿ, ಲೀಲಾವತಿ, ಸುಕನ್ಯ ಮುಕುಂದ, ಸುಮಾ ವೀಣಾ, ಪ್ರಭಾ ದಿನಮಣಿ, ಧಾರವಾಡದ ದಮಯಂತಿ ನರೇಗಲ್, ವಿದ್ಯಾ ಶಿರಹಟ್ಟಿ, ರೂಪಾ ಜೋಶಿ, ಮೈಸೂರಿನ ಡಾ. ಕರುಣಾ ಲಕ್ಷ್ಮಿ, ಗಣೇಶ ಅಮೀನಗಡ ಕೆ.ಎಂ.ಲೋಲಾಕ್ಷಿ, ಪದ್ಮಾ ಆನಂದ್, ಉಷಾ ನರಸಿಂಹನ್, ಬೆಂಗಳೂರಿನ ನಾಗವೇಣಿ ರಂಗನ್, ಮುಕುಂದ ಗಂಗೂರ್, ಯಶೋದಾ ಡಿ. ರಾಧಾ ಟೇಕಲ್, ಬೆಳಗಾವಿಯ ಮಧುರಾ ಕರ್ಣಂ, ದೀಪಿಕಾ ಚಾಟೆ, ಚಿಕ್ಕಮಗಳೂರಿನ ನಾಗಲಕ್ಷ್ಮಿ ಎಂ.ಜೆ., ಉತ್ತರ ಕನ್ನಡದ ಭಾಗೀರಥಿ
ಹೆಗಡೆ, ಡಾ. ವೀಣಾ ಸುಳ್ಯ, ಕೃಷ್ಣ ಪದಕಿ ರವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಸೀ.ಚ. ಯತೀಶ್ವರ, ಸಂಚಾಲಕಿ ಶೈಲಜಾ ಸುರೇಶ್, ಪತ್ರಕರ್ತರು ವೆಂಕಟೇಶ್, ಡಾ.ವಿಜಯ, ಡಾ.ಸಾವಿತ್ರಿ, ಉಮಾಶಂಕರ್, ಡಾ. ಹೇಮಾ ಪಟ್ಟಣಶೆಟ್ಟಿ ಮೊದಲಾದವರು ಇದ್ದರು.

