ಮೂಡಲಗಿ:- ಪಟ್ಟಣದ ಎಸ್ ಎಸ್ ಆರ್ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಅಬ್ದುಲ್ ರೆಹಮಾನ್ ಪೈಲ್ವಾನ್ ಈತನು ದಿನಾಂಕ 7.11.2025 ರಂದು ಗೋಕಾಕದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ “ಅಥ್ಲೆಟಿಕ್” ಕ್ರೀಡಾಕೂಟದಲ್ಲಿ 200ಮೀಟರ್ ಓಟದಲ್ಲಿ ಮತ್ತು 400ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈತನಿಗೆ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಆರ್. ಸೋನವಾಲ್ಕರ್,ಉಪಾಧ್ಯಕ್ಷರಾದ ರವೀಂದ್ರ ಪಿ ಸೋನವಾಲ್ಕರ್ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ ಹಿರೇಮಠ, ಶಾಲೆಯ ಉಪ ಪ್ರಾಚಾರ್ಯರಾದ ಬಿ. ಕೆ. ಕಾಡಪ್ಪಗೋಳ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೇಶ ಮೆಳವಂಕಿ,ಸುಭಾಸ ಕುರಣಿ ಹಾಗೂ ಎಲ್ಲ ಶಾಲಾ ಸಿಬ್ಬಂದಿಗಳು ಶುಭ ಕೋರಿದ್ದಾರೆ.

