ಲೇಖನ : ವಿಧುರ ಸ್ತ್ರೀ ಪಾತ್ರದಾರಿ ಹಳ್ಳಿಯ ಪ್ರತಿಭೆ ರವಿ ಹೆಚ್.ಡಿ.

Must Read

ಹಾಸನ ತಾಲ್ಲೂಕು ಕೆ.ಹಿರಿಹಳ್ಳಿ ಗ್ರಾಮದ ಹೆಚ್.ಡಿ.ರವಿ ಅವರಿಗೆ ಈ ವರ್ಷದ (೨೦೨೫) ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅವರ ರಂಗಭೂಮಿ ಸೇವೆಗಾಗಿ ದೊರೆತಿದೆ. ಇವರ ಅಣ್ಣ ಹೆಚ್.ಡಿ. ಅಣ್ಣಾಜಿಗೌಡರು ಸಾಮಾಜಿಕ ನಾಟಕದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಇವರ ತಮ್ಮ ಹೆಚ್.ಡಿ.ರವಿ ನನಗೆ ಮೊದಲು ಪರಿಚಯವಿರಲಿಲ್ಲ. ಅವರು ಹಾಸನ ಕಲಾಭವನದಲ್ಲಿ ಶಿವನ ಪಾತ್ರ ನಿರ್ವಹಿಸಿದ್ದರು.

ಪಾತ್ರಕ್ಕೆ ತಕ್ಕ ಆಳ್ತನ ಇಲ್ಲ. ಶಿವತಾಂಡವ ನೃತ್ಯದಲ್ಲಿ ಭಾವೋದ್ರೇಕಕ್ಕೆ ಒಳಗಾಗಿ ಕುಸಿದುಬಿದ್ದರು. ಆಗ ಹೊರಗೆ ನಾನು ಅವರನ್ನು ಭೇಟಿಯಾಗಿ ಏಕೆ ಅಷ್ಟೊಂದು ಆವೇಶ? ಎಂದೆ. ಇಲ್ಲಾ ಸಾರ್, ನೀವು ನನ್ನ ವಿಧುರನ ಪಾತ್ರ ನೋಡಿ ಎಂದರು. ಮುಂದೆ ಅವರ ವಿಧುರನ ಪಾತ್ರದ ಹಾಡುಗಾರಿಕೆ ಆಲಿಸಿದೆ. ಸ್ತ್ರೀ ಕಂಠ ಮಿಶ್ರಿತ ಹಾಡು ಅಭಿನಯ ಓಕೆ. ಅದಾಗಿ ನವೆಂಬರ್ ೧ಕ್ಕೆ ಅವರಿಗೆ ರಾಜ್ಯೋತ್ಸವ ಒಲಿದು ಬಂದಿದೆ. ಪೋನ್‌ಗೆ ಸಿಕ್ಕ ಅವರು ಅವರು ತಮ್ಮ ತಮ್ಮ ಕಲಾ ಪರಿಚಯ ಹಂಚಿಕೊಂಡರು.

ಹೆಚ್.ಡಿ.ರವಿ ಊರಿನ ಶನಿದೇವರ ಅರ್ಚಕರು. ತಂದೆ ಹೆಚ್.ಟಿ. ದಾಸೇಗೌಡರು ತಾಯಿ ಪುಟ್ಟಮ್ಮನವರು. ನನ್ನ ಅಣ್ಣ ಹೆಚ್.ಡಿ.ಅಣ್ಣಾಜಿಗೌಡರು ನಮ್ಮನ್ನು ಕೂಲಿ ಮಾಡಿ ಸಾಕಿ ವಿದ್ಯಾಭ್ಯಾಸ ಮಾಡಿ ಹೆಡ್‌ಮಾಸ್ಟರ್ ಆದವರು. ಸಾಮಾಜಿಕ ನಾಟಕಗಳನ್ನು ಮಾಡಿದವರು. ನನ್ನ ಓದು ಹತ್ತನೇ ತರಗತಿಗೆ ಮುಕ್ತಾಯ. ಅಣ್ಣನ ಹೆಜ್ಜೆ ಅನುಸರಿಸಿ ಕಲಾರಂಗಕ್ಕೆ ಬಂದೆ. ನನ್ನ ಶ್ರೀಮತಿ ಸುಜಾತ ಮತ್ತು ಮಕ್ಕಳು ಶ್ರೀಕಾಂತ್ ಹೆಚ್.ಆರ್. ಮತ್ತು ಸುನೀಲ್ ಹೆಚ್.ಆರ್. ಕಲಾರಂಗಕ್ಕೆ ನನಗೆ ಈತನಕ ಪ್ರೋತ್ಸಾಹ ಮಾಡುತ್ತಿದ್ದಾರೆ. ನಾನು ನನ್ನ ಹೆಂಡತಿ ಕೂಲಿ ಕೆಲಸ ಮಾಡಿ ಮಕ್ಕಳನ್ನು ಓದಿಸಿರುತ್ತೇವೆ. ನನ್ನ ಜೀವನದಲ್ಲಿ ನಾಟಕವನ್ನು ಮುಡಿಪಾಗಿಟ್ಟು ಕಳೆದ ೨೫ ವರ್ಷಗಳಿಂದಲೂ ನಟಿಸುತ್ತಿದ್ದೇನೆ. ನಮ್ಮೂರಿನಲ್ಲಿ ಮೊದಲಿಗೆ ರಾಜ ಸತ್ಯವ್ರತ ನಾಟಕದಲ್ಲಿ ಕಳ್ಳನ ಹೆಂಡ್ತಿ ಪಾತ್ರದಲ್ಲಿ ರಂಗಪ್ರವೇಶಿಸಿದೆ. ನಂತರ ನಾನು ಕುರುಕ್ಷೇತ್ರದಲ್ಲಿ ದ್ರೌಪದಿ ಪಾತ್ರದಾರಿ. ಹಾಸನದ ಕಲಾಭವನದಲ್ಲಿ ಮೊದಲು ಪಾತ್ರ ಮಾಡಿದ್ದು ಸೂತ್ರದಾರಿ.

ಈವರೆಗೆ ವಿಧುರನ ಪಾತ್ರದಲ್ಲಿ ೭೦ ಬಾರಿ, ಚಂದ್ರಹಾಸ ೨೫ ಬಾರಿ, ಅರ್ಜುನ ೨ ಬಾರಿ ನಟಿಸಿದ್ದೇನೆ. ನಟನೆಗಾಗಿ ಹಳ್ಳಿ ಪೇಟೆ ಸುತ್ತಿದ್ದೇನೆ. ಹೆಚ್ಚಾಗಿ ವಿಧುರನಾಗಿ ಉತ್ತರ ಕರ್ನಾಟಕ, ಡೆಲ್ಲಿ, ಮಂಡ್ಯ ಮೈಸೂರು ಹೊಸೂರು, ಕೌಶಿಕ, ಅಂಬುಗ, ಕಳ್ಳಿಕೊಪ್ಪಲು, ದೊಡ್ಡ ಆಲದಹಳ್ಳಿ, ಚನ್ನಪಟ್ಟಣ ಹೀಗೆ ಹಳ್ಳಿ ಪೇಟೆ ಪಟ್ಟಣಗಳಲ್ಲಿ ಹೋಗಿ ಅಭಿನಯಿಸಿದ್ದೇನೆ. ನಾನು ನಟಿಸಿದ ಇತರೆ ಪಾತ್ರಗಳು ೧ನೇ ದೇವಿ, ಸತ್ಯಮೂರ್ತಿ ನಾಟಕದಲ್ಲಿ ಶರತಕುಮಾರ್ ನಾರದ ಈಶ್ವರ ನಕುಲ. ನನ್ನ ನಾಟಕದ ಮೇಷ್ಟ್ರು ಅಶ್ವತ್ಥ ಕುಮಾರ್, ಪುಟ್ಟರಾಜು, ಮಂಜುನಾಥ್, ಮಡಬರೇವಣ್ಣ ಮತ್ತು ಪಾಲಾಕ್ಷಾಚಾರ್.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

LEAVE A REPLY

Please enter your comment!
Please enter your name here

Latest News

ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್‌ಬಾಲ್ ಕ್ರೀಡಾಕೂಟ

ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...

More Articles Like This

error: Content is protected !!
Join WhatsApp Group