೧೨ರಿಂದ ನ.೧೬ರ ವರೆಗೆ ಎಂಪಿಎಲ್-೨೦೨೫ ಕ್ರಿಕೆಟ್ ಟೂರ್ನಿ

Must Read

ಮೂಡಲಗಿ: ಮೂಡಲಗಿಯ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ ಹಾಗೂ ಲಯನ್ಸ ಕ್ಲಬ್ ಮೂಡಲಗಿ ಪರಿವಾರ ಇವರ ಸಹಯೋಗದಲ್ಲಿ ಇದೇ ನ. ೧೨ರಿಂದ ನ.೧೬ರ ವರೆಗೆ ೫ ದಿನಗಳ ವರೆಗೆ ಎಸ್‌ಎಸ್‌ಆರ್ ಕಾಲೇಜು ಮೈದಾನದಲ್ಲಿ ಮೂಡಲಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್‌ವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರಾದ ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ ಹಾಗೂ ಸನ್ನಿತ ಸೋನವಾಲಕರ ಹೇಳಿದರು.

ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಇಡಲಾಗಿದ್ದು,
ಪ್ರಥಮ ಬಹುಮಾನ ರೂ.೫೧,೦೦೧, ದ್ವಿತೀಯ ರೂ.೩೦,೦೦೧ ಹಾಗೂ ತೃತೀಯ ರೂ.೨೦,೦೦೧ ನಗದು ಬಹುಮಾನಗಳೊಂದಿಗೆ ಆಕರ್ಷಕ ಟ್ರೋಫಿಗಳನ್ನು ವಿಜೇತ ತಂಡಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಬಹುಮಾನಗಳ ಪ್ರಾಯೋಜಕತ್ವವನ್ನು ಕ್ರಮವಾಗಿ ಪ್ರಕಾಶ ಸೋನವಾಲಕರ, ಬಸವೇಶ್ವರ ಅರ್ಬನ್ ಕೋ.ಆಪ್ ಕೆಡಿಟ್ ಸೊಸೈಟಿತ ಆಡಳಿತ ಮಂಡಳಿ ಹಾಗೂ ಶ್ರೀಶೈಲ್ ಮದಗನ್ನವರ ಇವರು ವಹಿಸಿಕೊಂಡಿದ್ದಾರೆ.

ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರರಿಗೆ ಹಲವಾರು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ಟೂರ್ನಾಮೆಂಟದ ಪ್ರಚಾರ ಪತ್ರಿಕೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಬಿಡುಗಡೆ ಮಾಡಿದರು.

ಬಾಲಶೇಖರ ಬಂದಿ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಶಾಲ ಶೀಲವಂತ, ಗಿರೀಶ ಆಸಂಗಿ, ಕೃಷ್ಣಾ ಕೆಂಪಸತ್ತಿ, ವಿಶ್ವನಾಥ ಬೆಲ್ಲದ, ಪ್ರವೀಣ ಕುರಬಗಟ್ಟಿ, ಸೋಮು ಮಠಪತಿ, ಶೇಖರಯ್ಯ ಹಿರೇಮಠ, ಲಕ್ಕಪ್ಪ ತಳವಾರ, ಮಹೇಶ ಖಡಕಬಾವಿ, ಗಿರೀಶ ಮೇತ್ರಿ, ರವಿ ಪತ್ತಾರ, ಶಿವಬಸು ಭುಜನ್ನವರ ಮತ್ತಿತರರು ಇದ್ದರು.

 

 

LEAVE A REPLY

Please enter your comment!
Please enter your name here

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group